×
Ad

ಕಲಬುರಗಿ | ವಿವೇಕಾನಂದರ ಆದರ್ಶಗಳು ಜನಾಂಗಕ್ಕೆ ಮಾದರಿ : ಡಾ.ಬಸವರಾಜ ಪಾಟೀಲ

Update: 2026-01-16 23:21 IST

ಕಲಬುರಗಿ : ಸ್ವಾಮಿ ವಿವೇಕಾನಂದರ ಆದರ್ಶ ಬೋಧನೆಗಳು ಎಂದೆಂದಿಗೂ ಪ್ರಸ್ತುತವಾಗಿದ್ದು, ಅವರ ವಿಚಾರಗಳನ್ನು ಅಳವಡಿಸಿಕೊಂಡು ಉತ್ತಮವಾಗಿರುವ ಸಮಾಜ ನಿರ್ಮಾಣ ಮಾಡಬೇಕೆಂದು ರಾಜ್ಯಸಭಾ ಮಾಜಿ ಸದಸ್ಯ ಡಾ.ಬಸವರಾಜ ಪಾಟೀಲ ಸೇಡಂ ಕರೆ ನೀಡಿದರು.

ನಗರದ ಮಹಾಂತ ಜ್ಯೋತಿ ಪ್ರತಿಷ್ಠಾನ ಟ್ರಸ್ಟ್ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ಹಸಿವು ಮುಕ್ತ ಕಲಬುರಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರ ವಿಚಾರಗಳು, ಬೋಧನೆಗಳು ಮತ್ತು ಅವರ ಭಾಷಣಗಳು ಇಂದಿನ ಯುವಜನರಿಗೆ ಸಮೃದ್ಧ ಭಾರತ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ಅಲ್ಲದೇ ಹಸಿವು ಮುಕ್ತ ಕಾರ್ಯಕ್ರಮ ಆಯೋಜನೆ ಪುಣ್ಯದ ಕೆಲಸ ಎಂದರು.

ಅಪ್ಪಾರಾವ ಅಕ್ಕೋಣಿ ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸುರೇಶ್ ಕಲಶೆಟ್ಟಿ ಜಿಲ್ಲಾ, ವಿಜಯಕುಮಾರ್ ಬಿರಾದಾರ, ಬಸವರಾಜ ಎಸ್ ಎಂ, ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಸಂಸ್ಥೆ, ಪಾಂಡುರಂಗ ಕುಲಕರ್ಣಿ, ಎಎಸ್ ಐ, ಜಗದೀಪ, ಶಾಮರಾವ್ ಪಾಟೀಲ್, ಪ್ರಶಾಂತ್ ತಡಕಲೆ , ಶಾಂತಾ ವಾಲಿ, ಮಂಜುಳಾ ಡೊಳ್ಳೆ ಮತ್ತು ಪ್ರೀತಿ ಅಕ್ಕೋಣಿ ಯವರಿಗೆ ವಿವೇಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಡಾ.ಎ.ಎಸ್ ಭದ್ರಶೆಟ್ಟಿ, ಡಾ.ಸಿದ್ದರಾಮಪ್ಪ ಮಾಲಿ ಪಾಟೀಲ್ ಧಂಗಾಪುರ, ಡಾ. ಸುಭಾಷ್ ಕಮಲಾಪುರೆ, ರಾಜು ಕಾಕಡೆ, ಮಹಾದೇವಿ ಪಾಟೀಲ್ ಆಲಗೂಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಶಿವರಾಜ್ ಪಾಟೀಲ್ ಅವರು ನಿರೂಪಿಸಿದರು. ಪ್ರೀತಿ ಅಕ್ಕೋಣಿ ವಂದಿಸಿದರು. ಆಶ್ರಯ ಕಾಲೋನಿಯ 40ಕ್ಕೂ ಹೆಚ್ಚು ಕುಟುಂಬಗಳಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News