ಸೇಡಂ | ಅತಿವೃಷ್ಟಿಯಿಂದ ಬೆಳೆ ಹಾನಿ : ಹೆಚ್ಚಿನ ಪರಿಹಾರ ಒದಗಿಸುವಂತೆ ಕರವೇ ಆಗ್ರಹ
Update: 2026-01-17 18:58 IST
ಸೇಡಂ: 2025-26ನೇ ಸಾಲಿನಲ್ಲಿ ಭಾರೀ ಮಳೆ, ಪ್ರವಾಹದಿಂದಾಗಿ ಹಾನಿಗೊಳಗಾದ ರೈತರಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ತಾಲೂಕಿನಲ್ಲಿ ಅತಿವೃಷ್ಟಿಯಿಂದಾಗಿ ರೈತರು ಬೆಳೆದ ತೊಗರಿ ಬೆಳೆಗಳು ಮಳೆ ನೀರಿನಲ್ಲಿ ಮುಳುಗಿ ಸಂಪೂರ್ಣ ಹಾಳಾಗಿವೆ, ಈಗಾಗಲೇ ಸರ್ಕಾರದಿಂದ ರೈತರಿಗೆ ಪರಿಹಾರಧನ ನೀಡಲಾಗಿದೆ. ಆದರೆ, ಅತಿವೃಷ್ಟಿಯಿಂದ ಇಳುವರಿ ತುಂಬಾ ಕಡಿಮೆ ಆಗಿದ್ದರಿಂದ ಹೆಚ್ಚಿನ ಪರಿಹಾರಧನ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಮೌನೇಶ್ ಬೇನಕನಹಳ್ಳಿ, ಮಹಿಳಾ ಘಟಕ ತಾಲೂಕು ಅಧ್ಯಕ್ಷೆ ಶರಣಮ್ಮ, ರೈತ ಸಂಘ ಅಧ್ಯಕ್ಷ ಅಂಜುಕುಮಾರ ಬಿಲ್ಕುಲ್, ಉಪಾಧ್ಯಕ್ಷರಾದ ಬಸವರಾಜ ತಳವಾರ, ಸಂತೋಷ ನಮವಾರ, ಚೇತನ್ ಹಾಬಳಟಿ, ಶ್ರೀಶೈಲ್, ಸೈದಪ್ಪ, ನಾಗರಾಜ್, ಸುಮನ್, ರವಿಕುಮಾರ್, ವಿಶ್ವನಾಥ್ ಉಡಗಿ ಸೇರಿದಂತೆ ಹಲವರು ಇದ್ದರು.