ಕಲಬುರಗಿ | ಚಾಕುವಿನಿಂದ ಇರಿದು ಮಹಿಳೆಯ ಹತ್ಯೆ
Update: 2025-06-10 12:16 IST
ಕಲಬುರಗಿ: ಚಾಕುವಿನಿಂದ ಇರಿದು ಮಹಿಳೆಯೋರ್ವಳನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಶಹಾಬಜಾರ್ ಪ್ರದೇಶದ ಲಂಗೋಟಿ ಪೀರ್ ದರ್ಗಾದ ಸಮೀಪ ನಡೆದಿದೆ.
ಮೃತರನ್ನು ರೂಪಾ ವೆಂಕಟೇಶ್ ಬಿರಾದಾರ(33) ಎಂದು ಗುರುತಿಸಲಾಗಿದೆ.
ರೂಪಾ ಕಲ್ಲಹಂಗರ್ಗ ಗ್ರಾಮದವರಾಗಿದ್ದು, 10 ವರ್ಷಗಳ ಹಿಂದೆ ವೆಂಕಟೇಶ್ ಜೊತೆ ಮದುವೆಯಾಗಿದ್ದರು. ಅನೈತಿಕ ಸಂಬಂಧ ಹೊಂದಿರುವ ಕಾರಣಕ್ಕಾಗಿ ಆಕೆಯ ಪತಿ ವೆಂಕಟೇಶ್ ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತನಿಖೆಯಿಂದ ಮತ್ತಷ್ಟು ಸತ್ಯ ಹೊರಬೀಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.