ಕಾಳಗಿ | ಪದವೀಧರ ಶಿಕ್ಷಕರ ಸಂಘದ ಚುನಾವಣೆ : 12 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಕಾಳಗಿ: ತಾಲೂಕಿನ ಕರ್ನಾಟಕ ರಾಜ್ಯ ಪದವೀಧರ ಶಾಲಾ ಶಿಕ್ಷಕರ ಸಂಘದ 2026–31ನೇ ಸಾಲಿನ ಅವಧಿಯ ನಿರ್ದೇಶಕರ ಸ್ಥಾನಗಳ ಚುನಾವಣೆಗೆ ಒಟ್ಟು 12 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ಮಹೇಶ್ ಬಡಿಗೇರ ತಿಳಿಸಿದ್ದಾರೆ.
ಚುನಾವಣೆಯಲ್ಲಿ ನಿರ್ದೇಶಕರ ಸ್ಥಾನಗಳಿಗೆ ಶಿಕ್ಷಕರಾದ ದೇವೇಂದ್ರ ಓಕಳಿ, ನಾಗರಾಜ ಮಡಿವಾಳ, ಪ್ರಕಾಶ ರೊಳೆ, ನಾಗಪ್ಪ ಭೀಮಗೋಳ, ಮಲ್ಲಿಕಾರ್ಜುನ ಅಷ್ಟಗಿ, ಸಿದ್ಧಾರೂಢ, ಸಿದ್ಧರಾಮಪ್ಪ ದಳಪತಿ, ಮಹಿಬೂಬ್ ಸಾಬ್, ಆರತಿ, ಪೂಜಾ ಸಿಂಗೆ, ಜ್ಯೋತಿ ಪವರ್ ಹಾಗೂ ಭೀಮರಾಯ ನಾಮಪತ್ರ ಸಲ್ಲಿಸಿದ್ದಾರೆ.
ಒಟ್ಟು 12 ನಿರ್ದೇಶಕರ ಸ್ಥಾನಗಳಿಗೆ 12 ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿರುವುದರಿಂದ, ಸೆಪ್ಟೆಂಬರ್ 25ರಂದು ಚುನಾವಣೆಯ ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಲಾಗುವುದು ಎಂದು ಚುನಾವಣಾಧಿಕಾರಿ ಮಹೇಶ್ ಬಡಿಗೇರ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಸಂತೋಷ ಕಲಮೂಡ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಅನೀಲಕುಮಾರ ಗುತ್ತೇದಾರ, ಪ್ರೌಢಶಾಲಾ ಶಿಕ್ಷಕರ ಸಂಘದ ಶಿವಕುಮಾರ್ ಶಾಸ್ತ್ರಿ, ಚಂದ್ರಕಾಂತ ತಳವಾರ, ಬಸವಂತರಾಯ ಪೆದ್ದಿ, ವಿಷ್ಣುಕಾಂತ ಮೈಲಾರಿ, ಮುನ್ನಯ್ಯ ಗೋಳೆದಮಠ, ವಿವೇಕಾನಂದ, ವಿಜಯಕುಮಾರ್ ದೊಡ್ಡಮನಿ, ಪ್ರಭಾಕರ ಸೇರಿದಂತೆ ಅನೇಕರು ಇದ್ದರು.