×
Ad

ಪ್ರೊ. ಎಚ್.ಟಿ. ಪೋತೆ ರಚಿತ ‘ಮಹಾಯಾನ’ ಕೃತಿಗೆ ಚುಕ್ಕಿ ಪ್ರತಿಷ್ಠಾನದ ರಾಜ್ಯ ಮಟ್ಟದ ಪ್ರಶಸ್ತಿ

Update: 2026-06-06 18:26 IST

ಕಲಬುರಗಿ: ರಾಯಚೂರಿನ ಸಿರವಾರ ಪಟ್ಟಣದ ಚುಕ್ಕಿ ಪ್ರತಿಷ್ಠಾನವು ಲಿಂ. ಉಮಾಪತಿ ಚುಕ್ಕಿಯವರ 50ನೇ ಸುವರ್ಣ ಸ್ಮರಣೋತ್ಸವದ ಅಂಗವಾಗಿ ನೀಡುವ 2026-27ನೇ ಸಾಲಿನ ರಾಜ್ಯ ಮಟ್ಟದ ಸಾಹಿತ್ಯ ಪ್ರಶಸ್ತಿಗೆ ಗುಲ್ಬರ್ಗಾ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರು ಹಾಗೂ ಖ್ಯಾತ ಲೇಖಕರಾದ ಪ್ರೊ. ಎಚ್.ಟಿ. ಪೋತೆ ಅವರ ‘ಮಹಾಯಾನ’ ಮಹಾ ಕಾದಂಬರಿ ಆಯ್ಕೆಯಾಗಿದೆ.

ರಾಜ್ಯದ ವಿವಿಧ ಬರಹಗಾರರಿಂದ ಆಹ್ವಾನಿಸಲಾದ ಕೃತಿಗಳ ಪರಿಶೀಲನೆಯ ಬಳಿಕ ಪ್ರಶಸ್ತಿ ಆಯ್ಕೆ ಸಮಿತಿಯು ‘ಮಹಾಯಾನ’ ಕೃತಿಯನ್ನು ಅತ್ಯುತ್ತಮ ಕೃತಿಯೆಂದು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಚುಕ್ಕಿ ಪ್ರತಿಷ್ಠಾನ ತಿಳಿಸಿದೆ.

ಪ್ರೊ. ಎಚ್.ಟಿ. ಪೋತೆ ಅವರು ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹಿರಿಯ ಪ್ರಾಧ್ಯಾಪಕರು ಹಾಗೂ ನಿರ್ದೇಶಕರಾಗಿದ್ದು, ಕಲಾ ನಿಕಾಯದ ಡೀನ್‌ ಮತ್ತು ವಿದ್ಯಾವಿಷಯಕ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಥೆ, ಕಾದಂಬರಿ, ಪ್ರಬಂಧ, ಅನುವಾದ ಹಾಗೂ ವೈಚಾರಿಕ ಸಾಹಿತ್ಯ ಕ್ಷೇತ್ರದಲ್ಲಿ ಅವರು ನೀಡಿರುವ ಕೊಡುಗೆಗಳು ವ್ಯಾಪಕ ಮೆಚ್ಚುಗೆ ಪಡೆದಿವೆ.

ಪ್ರಶಸ್ತಿ ಪ್ರದಾನ ಸಮಾರಂಭವು ಜೂನ್ 11ರಂದು ಸಿರವಾರದ ದೇವದುರ್ಗ ಕ್ರಾಸ್‌ನಲ್ಲಿರುವ ಚುಕ್ಕಿ ರುದ್ರಮ್ಮ ಉಮಾಪತೆಪ್ಪ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಸಮಾರಂಭದಲ್ಲಿ ಪ್ರೊ. ಪೋತೆ ಅವರಿಗೆ 10,000 ನಗದು ಬಹುಮಾನ, ಪ್ರಶಸ್ತಿ ಫಲಕ, ಪ್ರಮಾಣಪತ್ರ ಹಾಗೂ ಫಲ-ಪುಷ್ಪ ನೀಡಿ ಗೌರವಿಸಲಾಗುವುದು ಎಂದು ಚುಕ್ಕಿ ಪ್ರತಿಷ್ಠಾನದ ಅಧ್ಯಕ್ಷ ಸೂಗಪ್ಪ ಸಾಹುಕಾರ ಚುಕ್ಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News