ಕಲಬುರಗಿ: ಸಾಹಿತ್ಯ ಕ್ಷೇತ್ರದ ಸಾಧಕರಿಗೆ ರಾಷ್ಟ್ರಕವಿ ಕುವೆಂಪು ರತ್ನ ಪ್ರಶಸ್ತಿ ಪ್ರದಾನ
ಕಲಬುರಗಿ: ನಗರದ ಕನ್ನಡ ಭವನದಲ್ಲಿ ಜೈಕನ್ನಡಿಗರ ರಕ್ಷಣಾ ವೇದಿಕೆಯ ವತಿಯಿಂದ 121ನೇ ರಾಷ್ಟ್ರಕವಿ ಕುವೆಂಪು ರವರ ಜನ್ಮದಿನ ಆಚರಣೆ ಹಾಗೂ ರಾಷ್ಟ್ರಕವಿ ಕುವೆಂಪುರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನಡೆಯಿತು.
ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಡಾ. ಸಂಗೀತಾ ಎಮ್. ಹಿರೇಮಠ, ಮಂಗಳಾ ವಿ. ಕಪರೆ, ಅನಿತಾ ಬಡಿಗೇರ, ಅಂಬುಜಾ ಎಮ್.ಡಿ, ಎ.ಕೆ.ರಾಮೇಶ್ವರ, ಎಸ್.ಎಲ್. ಪಾಟೀಲ, ಅಮೃತ ಡಿ. ದೊಡ್ಡಮನಿ, ಪರೋಷೋತ್ತಮ ಕುಲಕರ್ಣಿ ಅವರುಗಳಿಗೆ ರಾಷ್ಟ್ರಕವಿ ಕುವೆಂಪುರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಜೈ ಸುರೇಶ ಮಾಲಿಕ್, ಹಜರತ್ ಬಾಬುಶಾ ಸಾಹೇಬ್ ದಾದಾಪೀರ್ ಗೋಟುರ್, ಪೂಜ್ಯ ಗುರುರಾಜೇಂದ್ರ ಶಿವಯೋಗಿಗಳು ವಹಿಸಿದ್ದರು.
ರಾಜ್ಯಾಧ್ಯಕ್ಷರಾದ ಸಚಿನ್ ಫರಹತಾಬಾದ, ಸಹಾರ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಎಂ.ಡಿ. ಸಿದ್ದಿಕ್, ಸುರೇಶ ಬಡಿಗೇರ, ದಕ್ಷಿಣ ಕಾಂಗ್ರೆಸ್ ಮುಖಂಡ ನೀಲಕಂಠರಾವ ಮುಲಗೆ, ಕಾಂಗ್ರೆಸ್ ಮುಖಂಡ ರಾಜೀವ ಜಾನೆ, ಧೂಳಪ್ಪ ದೊಡ್ಡಮನಿ, ಪಂಚ ಗ್ಯಾರೆಂಟಿಯ ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ ಕಟ್ಟಿಮನಿ, ಕಲ್ಯಾಣ ಕರ್ನಾಟಕ ಅಧ್ಯಕ್ಷ ಅಭಿಷೆಕ್ ಬಾಲಾಜಿ, ಮುಖಂಡ ಗೀರಿಶ ಬೋರೆ, ಮಾಜಿ ತಾಲೂಕಾ ಪಂಚಾಯತಿ ಸದಸ್ಯ ಜೈಭೀಮ್ ಹುಡುಗಿ, ರಾಜಕುಮಾರ್ ಆರ್., ಡಾ. ಅಣ್ಣಪ್ಪಾ ಎಸ್.ಜಿ., ನ್ಯಾಯವಾದಿ ಶ್ರೀನಿವಾಸ ವಿಶ್ವಕರ್ಮ, ಸುರೇಶ ಹನಗುಡಿ, ಅಕ್ಷಯ, ಗುಡ್ಡು ಸಿಂಗ್, ಅಣವೀರ ಪಾಟೀಲ, ಶಿವಕುಮಾರ ಯಾದವ, ಪಿಂಟು ಜಮಾದಾರ, ಹುಲಿಕಂಠ, ಮಲ್ಲು, ದರ್ಶನ, ಶ್ರೀಮಂತ ಸೇರಿದಂತೆ ಇತರರು ಉಪಸ್ಥಿತರಿದ್ದರು.