×
Ad

ದೇಶದ ಜ್ವಲಂತ ಸಮಸ್ಯೆಗಳ ವಿಮುಕ್ತಿಗೆ ಸಮಾಜವಾದಿ ಕ್ರಾಂತಿಯೊಂದೇ ಪರಿಹಾರ: ಗಣಪತರಾವ.ಕೆ.ಮಾನೆ

Update: 2025-11-19 11:47 IST

ಕಲಬುರಗಿ: ಪ್ರಜಾಪ್ರಭುತ್ವದ ಮುಖವಾಡ ಹೊತ್ತಿರುವ ದೇಶದ ಬಂಡವಾಳಶಾಹಿ ಸರಕಾರಗಳು ಕಾರ್ಮಿಕರನ್ನು ಹಾಗೂ ದೇಶದ ಸಂಪತ್ತನ್ನು ಲೂಟಿ ಮಾಡಲು ಮುಕ್ತ ಅವಕಾಶವನ್ನು ಕೆಲವೇ ಕೆಲವು ಶ್ರೀಮಂತರಿಗೆ ತೆರೆದಿಟ್ಟಿದ್ದಾರೆ. ಇಂತಹ ಸರಕಾರಗಳನ್ನು ಕಿತ್ತೊಗೆದು, ದೇಶದ ಜ್ವಲಂತ ಸಮಸ್ಯೆಗಳ ವಿಮುಕ್ತಿಗೆ ಕ್ರಾಂತಿಯ ಮೂಲಕ ಸಮಾಜವಾದಿ ಸರಕಾರಗಳನ್ನು ಸ್ಥಾಪಿಸಲು ಕಾರ್ಮಿಕರು ಒಗ್ಗಟ್ಟಾಗಬೇಕಿದೆ ಎಂದು ಎಸ್.ಯು.ಸಿ.ಐ (ಸಿ) ಪಕ್ಷದ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಕಾಮ್ರೇಡ್ ಗಣಪತರಾವ.ಕೆ.ಮಾನೆ ರವರು ಹೇಳಿದರು.

ಅವರು ಶಹಾಬಾದ್ ನಗರದ ಎಸ್.ಯು.ಸಿ.ಐ (ಐ) ಪಕ್ಷದ ವತಿಯಿಂದ ಎಸ್.ಯು.ಸಿ.ಐ ಕಚೇರಿಯಲ್ಲಿ ರಷ್ಯಾದ ನವೆಂಬರ್ ಕ್ರಾಂತಿಯ 108ನೇ ವರ್ಷಾಚರಣೆಯನ್ನು ಆಚರಿಸಿ ಮಾತನಾಡಿದರು.

ಸಾಮ್ರಾಜ್ಯಶಾಹಿಗಳು ಹಾಗೂ ಬಂಡವಾಳಶಾಹಿಗಳ ಅತಿಯಾದ ಧನದಾಹದಿಂದ್ದಾಗಿ ದೇಶದ ರೈತ-ಕಾರ್ಮಿಕವರ್ಗವು ಸಮಸ್ಯೆಯ ಬವಣೆಯಲ್ಲಿ ಸಿಲುಕಿದ್ದಾರೆ. ಸಂಪತ್ತನ್ನು ಸೃಷ್ಟಿ ಮಾಡುವ ರೈತ-ಕಾರ್ಮಿಕರು ನಿರ್ಗತಿಕರಾಗಿದ್ದಾರೆ. ಈ ಹೋರಾಟಕ್ಕೆ 1917ರ ರಷ್ಯಾದ ಮಹಾಕ್ರಾಂತಿಯು ನಮಗೆ ಸ್ಫೂರ್ತಿಯಾಗಿದೆ ಎಂದರು.

ಪ್ರಪoಚದಲ್ಲಿಯೇ ರೋಗಗ್ರಸ್ಥವಾದ ದೇಶವಾದ ರಷ್ಯಾದಲ್ಲಿ ಕಾಮ್ರೇಡ್ ಲೆನಿನ್ ರವರು ಶೋಷಿತ ಕಾರ್ಮಿಕರನ್ನು ಕಮ್ಯೂನಿಸ್ಟ್ ವಿಚಾರಧಾರೆಯ ಆಧಾರದ ಮೇಲೆ ಸಂಘಟಿಸಿ ಕ್ರೂರ ಝಾರ್ ದೊರೆಗಳ ವಿರುದ್ಧ ಹೋರಾಟಗಳನ್ನು ಬೆಳೆಸಿ, 1917ರ ನವೆಂಬರನಲ್ಲಿ ಸಮಾಜವಾದಿ ಕ್ರಾಂತಿ ನೇರವೆರಿಸಿದರು. ಕ್ರಾಂತಿಯ ನಂತರ ಯು.ಎಸ್.ಎಸ್.ಆರ್ ಆದ ರಷ್ಯಾ ದೇಶವನ್ನು ಮುನ್ನಡೆಸಿದ ಲೆನಿನ್ ಹಾಗೂ ಸ್ಟಾಲಿನ್ ರವರು ಸಮಾಜವಾದಿ ವ್ಯವಸ್ಥೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಎಲ್ಲಾ ರಂಗಗಳಲ್ಲೂ ಅಭಿವೃದ್ಧಿಗೊಳಿಸಿದರು. ಬಡತನ, ನಿರುದ್ಯೋಗ, ಬೆಲೆಏರಿಕೆ, ಅನಕ್ಷರತೆ, ವೈಶ್ಯವಾಟಿಕೆಯಂತಹ ಹಲವು ಸಮಸ್ಯೆಗಳನ್ನು ಬುಡಸಮೇತ ಕಿತ್ತುಹಾಕಿ ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡಿದ್ದರು. ಭಾರತದಲ್ಲಿ ಅಂತಹ ಸಮಾನತೆಯ ಸಮಾಜದ ಕನಸು ಕಂಡಿದ್ದ ಭಗತಸಿಂಗ್, ನೇತಾಜಿ ಸುಭಾಷಚಂದ್ರ ಬೋಸರ ಕನಸು ಇಂದಿಗೂ ಕನಸಾಗಿಯೇ ಉಳಿದಿದೆ. ದೇಶವನ್ನು ಇಲ್ಲಿಯವರೆಗೆ ಆಳ್ವಿಕೆ ಮಾಡಿರುವ ಎಲ್ಲಾ ಪಕ್ಷಗಳು ಬಂಡವಾಳಶಾಹಿಗಳಿಗೆ ಸೇವೆ ಸಲ್ಲಿಸುತ್ತಿರುವುದರಿಂದ, ಜನಸಾಮಾನ್ಯರ ಸಮಸ್ಯೆಗಳು ಹಾಗಿಯೇ ಉಳಿದಿವೆ ಎಂದು ಹೇಳುತ್ತಾ ಜನಾಂದೋಲದ ಮೂಲಕ ಈ ವ್ಯವಸ್ಥೆಯನ್ನು ಕಿತ್ತೊಗೆದು ಸಮಾನತೆಯ ಸಮಾಜವಾದಿ ವ್ಯವಸ್ಥೆಯನ್ನು ಸ್ಥಾಪಿಸಬೇಕೆಂದರು.

ಜಿಲ್ಲಾ ಸಮಿತಿಯ ಸದಸ್ಯರಾದ ರಾಮಣ್ಣ.ಎಸ್.ಇಬ್ರಾಹಿಂಪೂರ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್.ಯು.ಸಿ.ಐ (ಸಿ) ನಾಯಕ ನಿಲಕಂಠ.ಎಮ್.ಹುಲಿ ಅಧ್ಯಕ್ಷತೆ ವಹಿಸಿದ್ದರು.

ಜಗನ್ನಾಥ ಎಸ್.ಎಚ್. ರಾಘವೇಂದ್ರ.ಎಮ್.ಜಿ. ಗುಂಡಮ್ಮ ಮಡಿವಾಳ, ರಾಜೇಂದ್ರ ಆತ್ನೂರ್, ಭಾಗಣ್ಣ ಬುಕ್ಕ, ರಮೇಶ ದೇವಕರ. ತಿಮ್ಮಣ್ಣ ಮಾನೆ. ಸಿದ್ದು ಚೌದರಿ. ಮಹಾದೇವಿ ಮಾನೆ, ಮಹಾದೇವಿ ಆತ್ನೂರ, ಶಿವುಕುಮಾರ ಕುಸಾಳೆ, ರೇಣುಕಾ. ಸ್ಪೂರ್ತಿ ಗುರಜಾಲಕರ್, ರಾಧಿಕಾ ಚೌದರಿ. ಸುಕನ್ಯಾ. ರಘು ಪವಾರ. ಆನಂದ, ಕಿರಣ ಮಾನೆ, ಅಜಯ ಗುರಜಾಲಕರ್, ಬಾಬು ಸೇರಿ ಹಲವಾರು ಜನ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News