ಅಪಘಾತದ ಬಳಿಕ ಸುಟ್ಟು ಕರಕಲಾದ ಎಥೆನಾಲ್ ಸಾಗಿಸುತ್ತಿದ್ದ ಟ್ಯಾಂಕರ್: ಕಲಬುರಗಿ ಮೂಲದ ಚಾಲಕ ತೆಲಂಗಾಣದಲ್ಲಿ ಸಜೀವ ದಹನ
Update: 2025-11-27 18:58 IST
ಕಲಬುರಗಿ : ಚಿಂಚೋಳಿ ಪಟ್ಟಣದ ಹೊರವಲಯದಲ್ಲಿರುವ ಸಿದ್ಧಸಿರಿ ಎಥೆನಾಲ್ ಮತ್ತು ಪವರ್ ಘಟಕದ ಎಥೆನಾಲ್ ಸಾಗಿಸುತ್ತಿದ್ದ ಟ್ಯಾಂಕರ್‌ವೊಂದು ವಾಹನವೊಂದಕ್ಕೆ ಢಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿದ್ದು, ಟ್ಯಾಂಕರ್ ಚಾಲಕ ಸಜೀವ ದಹನವಾಗಿದ್ದಾರೆ.
ತೆಲಂಗಾಣದ ಹನ್ನವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಘಟನೆ ನಡೆದಿದೆ. ಚಿಂಚೋಳಿ ತಾಲೂಕಿನ ಹೂಡದಳ್ಳಿ ಗ್ರಾಮದ ನಿರಂಜನ ಜಮಾದಾರ (30) ಮೃತ ಚಾಲಕ ಎಂದು ಗುರುತಿಸಲಾಗಿದೆ.
ಚಿಂಚೋಳಿಯಿಂದ ಎಥೆನಾಲ್ ತುಂಬಿಕೊಂಡು ಟ್ಯಾಂಕರ್ ತೆಲಂಗಾಣಕ್ಕೆ ಸಾಗುತ್ತಿದ್ದ ವೇಳೆ ಅಪಘಾತಕ್ಕಿಡಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ತೆಲಂಗಾಣದ ಹನ್ನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.