ಕಲಬುರಗಿಯಲ್ಲಿ ಬಿಗಿ ಬಂದೋಬಸ್ತ್ : ವಿವಿಧೆಡೆ ತೀವ್ರ ತಪಾಸಣೆ
Update: 2025-05-10 13:04 IST
ಕಲಬುರಗಿ : ಭಾರತ -ಪಾಕಿಸ್ತಾನ ಗಡಿ ಮಧ್ಯೆ ಯುದ್ಧದ ಭೀತಿ ಉಲ್ಬಣಗೊಳ್ಳುತ್ತಿರುವ ಬೆನ್ನಲ್ಲೇ ದೇಶದ ಪ್ರಮುಖ ನಗರಗಳಲ್ಲಿ ಬಿಗಿ ಬಂದೋಬಸ್ತ್ ಒದಗಿಸಲಾಗುತ್ತಿದ್ದು, ಕಲಬುರಗಿ ನಗರದ ವಿವಿಧೆಡೆಯೂ ಬಾಂಬ್ ನಿಷ್ಕ್ರಿಯ ದಳದಿಂದ ತೀವ್ರ ತಪಾಸಣೆ ನಡೆಸಲಾಗುತ್ತಿದೆ.
ನಗರದ ಸರ್ಧಾರ್ ವಲ್ಲಭಭಾಯಿ ಪಟೇಲ್ ವೃತ್ತ, ಜಿಲ್ಲಾಧಿಕಾರಿ ಕಚೇರಿ, ಕೇಂದ್ರ ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್, ವಿಮಾನ ನಿಲ್ದಾಣ ಸೇರಿದಂತೆ ಜನಬೀಡ ಪ್ರದೇಶಗಳಲ್ಲಿ ತೀವ್ರ ತಪಾಸಣೆ ಮಾಡಲಾಗುತ್ತಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಅಂಗವಾಗಿ ತಪಾಸಣೆ ನಡೆಸಿದ್ದಾರೆ.
ಇನ್ನೂ ಕಲಬುರಗಿ ವಿಮಾನ ನಿಲ್ದಾಣ ಸುತ್ತಮುತ್ತಲೂ ಭದ್ರತೆ ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.