×
Ad

ಕಾಸರಗೋಡು: ಕ್ಲಿನಿಕ್‌ನಲ್ಲಿ ಬೆಂಕಿ ಆಕಸ್ಮಿಕ; ಅಪಾರ ಹಾನಿ

Update: 2025-09-23 14:51 IST

ಕಾಸರಗೋಡು:  ಅಶ್ವಿನಿ ನಗರದಲ್ಲಿ ಕಾರ್ಯಾಚರಿಸುತ್ತಿರುವ ಚರ್ಮ ಹಾಗೂ ಮಕ್ಕಳ ತಪಾಸಣಾ ಕ್ಲಿನಿಕ್ ನಲ್ಲಿ ಸೋಮವಾರ ತಡರಾತ್ರಿ ಅಗ್ನಿ ಅನಾಹುತ ಉಂಟಾಗಿದ್ದು, ಅಗ್ನಿ ಶಾಮಕ ದಳದ ಸಿಬಂಬ್ದಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.

ಡಾ.ಗೋಪಾಲಕೃಷ್ಣ ಹಾಗೂ ಪತ್ನಿ ಡಾ. ಸುಧಾ ಭಟ್ ರವರ ಎಂಬವರ ಸ್ಪರ್ಷ ಸ್ಕಿನ್ ಆಂಡ್ ಕಿಡ್ಸ್ ಕೆಯರ್ ಅಗ್ನಿ ಗಾಹುತಿಯಾಗಿದೆ.  ರಾತ್ರಿ 11.30 ರ ಸುಮಾರಿಗೆ ಹೊಗೆ ಕಂಡುಬಂದ ಹಿನ್ನಲೆಯಲ್ಲಿ ಸಮೀಪದ ಹೊಟೇಲ್ ಕಾರ್ಮಿಕರು ಅಗ್ನಿ ಶಾಮಕ ದಳದ ಸಿಬಂದಿಗೆ ಮಾಹಿತಿ ನೀಡಿದ್ದಾರೆ.

ನಾಲ್ಕು ಕೋಣೆ ಗಳನ್ನು ಹೊಂದಿರುವ ಕ್ಲಿನಿಕ್ ನೊಳಗೆ ದಟ್ಟ ಹೊಗೆಯು ಕಾರ್ಯಾಚರಣೆಗೆ ಅಡಚಣೆಯಾದರೂ ಅಗ್ನಿಶಾಮಕ ದಳದ ಸಿಬಂದಿ ಹರಸಾಹಸದಿಂದ ಬೆಂಕಿಯನ್ನು ನಂದಿಸುವಲ್ಲಿ ಸಫಲರಾದರು. ಕ್ಲಿನಿಕ್ ನಲ್ಲಿದ್ದ ಫ್ಯಾನ್, ಕಂಪ್ಯೂಟರ್ ಗಳು, ಫರ್ನಿಚರ್, ಫ್ರಿಡ್ಜ್, ಕ್ಲಿನಿಕ್ ಉಪಕರಣಗಳು, ಔಷಧಿಗಳು, ಎ.ಸಿ ಮೊದಲಾದವು ಸಂಪೂರ್ಣ ಸುಟ್ಟು ಹೋಗಿವೆ. 

ಹೊಟೇಲ್ , ಕಂಪ್ಯೂಟರ್ ಸಂಸ್ಥೆ, ದಂತ ಚಿಕಿತ್ಸಾಲಯ, ಹಣಕಾಸು ಸಚಿವಾಲಯ, ಲಾಡ್ಜಿಂಗ್ ಮೊದಲಾದ 15 ಸಂಸ್ಥೆಗಳು ಈ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ಅಬ್ದುಲ್ಲಾ ಹಾಜಿ ಎಂಬವರ ಮಾಲಕತ್ವದ ಈ ಕಟ್ಟಡದಲ್ಲಿ ಕೆಳ ಅಂತಸ್ತಿನಲ್ಲಿ ಕ್ಲಿನಿಕ್ ಕಾರ್ಯಾಚರಿಸುತ್ತಿದೆ. ಸುಮಾರು 25 ಲಕ್ಷ ರೂ. ನಷ್ಟು ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ. ಶಾರ್ಟ್ ಸರ್ಕ್ಯೂಟ್ ಅನಾಹುತಕ್ಕೆ ಕಾರಣ ಎಂದು ಶಂಕಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News