ಕಾಸರಗೋಡು | ಕೆ.ಎಂ.ಹೈದರ್ ನಿಧನ
ಕೆ.ಎಂ.ಹೈದರ್
ಕಾಸರಗೋಡು : ಇಲ್ಲಿನ ಆಲಿಯಾ ಅರೇಬಿಕ್ ಕಾಲೇಜಿನಲ್ಲಿ 5 ದಶಕಗಳಿಗೂ ಸುದೀರ್ಘ ಕಾಲದಿಂದ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಕೆ.ಎಂ.ಹೈದರ್ ಅವರು ಬುಧವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಅಸೌಖ್ಯದಿಂದ ನಿಧನರಾಗಿದ್ದಾರೆ.
ಅವರಿಗೆ 78 ವರ್ಷ ವಯಸ್ಸಾಗಿತ್ತು. ಮಂಗಳೂರಿನ ದಿವಂಗತ ಕುದ್ರೋಳಿ ಹಸನಬ್ಬ ಅವರ ಹಿರಿಯ ಪುತ್ರರಾದ ಕೆ.ಎಂ.ಹೈದರ್ ಅವರು ಕಾಸರಗೋಡಿನ ಆಲಿಯಾ ಅರೇಬಿಕ್ ಕಾಲೇಜಿನಲ್ಲಿ ಪದವಿ ಹಾಗೂ ಸೌದಿ ಅರೇಬಿಯಾದ ಮದೀನ ವಿಶ್ವವಿದ್ಯಾನಿಲಯದಲ್ಲಿ ತರಬೇತಿ ಬಳಿಕ ಆಲಿಯಾ ಅರೇಬಿಕ್ ಕಾಲೇಜಿನಲ್ಲಿ 1973ರಲ್ಲಿ ಅಧ್ಯಾಪಕರಾಗಿ ಸೇವೆ ಪ್ರಾರಂಭಿಸಿದರು.
ಜಮಾಅತೆ ಇಸ್ಲಾಂ ಹಿಂದ್ ನಲ್ಲಿ ಸಕ್ರಿಯವಾಗಿದ್ದ ಹೈದರ್ ಅವರು ಸರಳ, ಸಜ್ಜನ ವ್ಯಕ್ತಿತ್ವದವರಾಗಿದ್ದರು. ಸಾವಿರಾರು ವಿದ್ಯಾರ್ಥಿಗಳಿಗೆ ಇಸ್ಲಾಮಿಕ್ ಶಿಕ್ಷಣ ನೀಡಿದ್ದರು. ಮೃತರರು ಪತ್ನಿ, 4 ಗಂಡು, 4 ಹೆಣ್ಣು ಮಕ್ಕಳು , ಬಂಧು ಬಳಗ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರ ಗುರುವಾರ ಪರವನಡ್ಕಂ ನಲ್ಲಿ ನಡೆಯಲಿದೆ.