×
Ad

ಕಾಸರಗೋಡು | ಪೊಲೀಸ್‌ ಕಸ್ಟಡಿಯಿಂದ ಪರಾರಿಯಾದ ಪೋಕ್ಸೋ ಆರೋಪಿಯ ಬಂಧನ

Update: 2025-12-04 12:27 IST

ಸಾಂದರ್ಭಿಕ ಚಿತ್ರ PC: istockphoto

ಕಾಸರಗೋಡು: ಪೋಕ್ಸೊ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಪರಾರಿಯಾದ ಘಟನೆ ಬುಧವಾರ ಕಾಸರಗೋಡಿನಲ್ಲಿ ನಡೆದಿದ್ದು, ಕೆಲ ತಾಸುಗಳ ಬಳಿಕ ಈತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ನೆಕ್ರಾಜೆ ಕೊರೆಕ್ಕಾನದ ಅಶ್ವಥ್ ( 19) ಪರಾರಿಯಾಗಿದ್ದ ಆರೋಪಿ. ಪರಾರಿಯಾದ ಬಳಿಕ ನಗರದ ಅನೆಬಾಗಿಲು ಎಂಬಲ್ಲಿನ ಪೊದೆಯೊಂದರಲ್ಲಿ ಅವಿತುಕೊಂಡಿದ್ದ ಈತನನ್ನು, ಪೊಲೀಸರು  ಬಂಧಿಸಿದ್ದಾರೆ.

ಫೋಕ್ಸೊ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ವಿಚಾರಣೆಗೆ ಕಾಸರಗೋಡು ನ್ಯಾಯಾಲಯವು ಆರೋಪಿಯನ್ನು ಬುಧವಾರ ಮಧ್ಯಾಹ್ನಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ಪೊಲೀಸರು ಕಾಸರಗೋಡು ನಗರ ಠಾಣೆಗೆ ಕರೆದು ಕೊಂಡು ಬಂದ ಸಂದರ್ಭದಲ್ಲಿ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದನು.  

ಕೂಡಲೇ ಹುಡುಕಾಟ ಪ್ರಾರಂಭಿಸಿದ ಪೊಲೀಸರು, ಆನೆಬಾಗಿಲು ಎಂಬಲ್ಲಿ ಪೊದೆಯಲ್ಲಿ ಅವಿತುಕೊಂಡಿದ್ದ ಈತನನ್ನು ಸಂಜೆ ವೇಳೆ ಬಂಧಿಸಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News