ಸುನ್ನೀ ಸಂಸ್ಥೆಗಳು ಹಿರಿಯ ಪಂಡಿತರ ತ್ಯಾಗದ ಗುರುತುಗಳು: ಪ್ರೊ. ಎ. ಕೆ. ಅಬ್ದುಲ್ ಹಮೀದ್
ಜಾಮಿಯಾ ಸಅದಿಯಾ ಸನದುದಾನ ಸಮ್ಮೇಳನ
ಸಅದಿಯ್ಯ ಸನದ್ ದಾನ ಆಂಡ್ ನೇರ್ಚೆಯ ಅಂಗವಾಗಿ ನಡೆದ ಸಂಘಟನಾ ಸಮ್ಮೇಳನವನ್ನು ಸುನ್ನೀ ಎಜುಕೇಶನ್ ಬೋರ್ಡ್ ಕಾರ್ಯದರ್ಶಿ ಪ್ರೊ. ಎ.ಕೆ. ಅಬ್ದುಲ್ ಹಮೀದ್ ಉದ್ಘಾಟಿಸುತ್ತಿರುವುದು.
ಕಾಸರಗೋಡು: ಜಾಮಿಅ ಸಅದಿಯ್ಯ ಸೇರಿದಂತೆ ವಿವಿಧ ಸಂಸ್ಥೆಗಳು ಕೇರಳದ ಸುನ್ನೀ ಸಂಘಟನಾ ಚಳವಳಿಯೂ ತಾಜುಲ್ ಉಲಮಾ ಮತ್ತು ನೂರುಲ್ ಉಲಮಾ ಸೇರಿದಂತೆ ಹಿರಿಯ ಪಂಡಿತರ ತ್ಯಾಗದ ಜ್ವಲಿಸುವ ಗುರುತುಗಳಾಗಿವೆ ಎಂದು ಸುನ್ನಿ ಎಜುಕೇಶನ್ ಬೋರ್ಡ್ ಕಾರ್ಯದರ್ಶಿ ಪ್ರೊ. ಎ. ಕೆ. ಅಬ್ದುಲ್ ಹಮೀದ್ ಹೇಳಿದರು.
ಅ.21 ರಂದು ಕಾಸರಗೋಡು ದೇಳಿಯಲ್ಲಿರುವ ಸಅದಿಯ್ಯ ಸನದ್ ದಾನ ಕಾರ್ಯಕ್ರಮದ ಭಾಗವಾಗಿ ನಡೆದ ಸಂಘಟನಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಮಸ್ತ ಯುವಜನ, ವಿದ್ಯಾರ್ಥಿ ಸಂಘಟನೆಗಳ ರೂಪೀಕರಣ, ಮದರಸಾ ಶಿಕ್ಷಕರ ಸಂಘಟನೆ, ಮತ್ತು ಸಮನ್ವಯ ಮಾದರಿ ಶಿಕ್ಷಣ ರೂಪಿಸುವ ಕಾರ್ಯಗಳಲ್ಲಿ ನೂರುಲ್ ಉಲಮಾ ಎಂ. ಎ. ಉಸ್ತಾದ್ ಅವರ ಸೇವೆ ಸದಾ ಸ್ಮರಣೀಯವಾಗಿರುತ್ತದೆ ಎಂದು ಅವರು ಹೇಳಿದರು.
ಬಿ. ಎಸ್. ಅಬ್ದುಲ್ಲ ಕುಂಞಿ ಫೈಝಿ ಅಧ್ಯಕ್ಷತೆ ವಹಿಸಿದ್ದರು. ವಿಪಿಎಮ್ ಫೈಝಿ ವಿಲ್ಯಪ್ಪಳ್ಳಿ ಮುಖ್ಯ ಭಾಷಣ ಮಾಡಿದರು. ಕೂಟಂಬಾರ ಅಬ್ದುಲ್ ರಹ್ಮಾನ್ ದಾರಿಮಿ ಮತ್ತು ಫಿರ್ದೌಸ್ ಸಖಾಫಿ ಕಡವತ್ತೂರು ಸಂದರ್ಭೋಚಿತವಾಗಿ ಮಾತನಾಡಿದರು.
ಅಲಿಕ್ಕುಞಿದಾರಿಮಿ ತಳಿಪರಂಬ್, ವೈ. ಎಂ. ಅಬ್ದುರ್ರಹ್ಮಾನ್ ಅಹ್ಸನಿ, ಹಾಮಿದ್ ಮಾಸ್ಟರ್ ಚೊವ್ವ ಅಬ್ದುರ್ರಶೀದ್ ನರಿಕ್ಕೋಡ್, ಉಮರ್ ಹಾಜಿ ಮಟ್ಟನ್ನೂರು, ಬಶೀರ್ ಪುಳಿಕ್ಕೂರು, ಅಬ್ದುಲ್ ಖಾದಿರ್ ಸಖಾಫಿ ಮೊಗ್ರಾಲ್, ವಿ.ಸಿ. ಅಬ್ದುಲ್ಲ ಸಅದಿ, ಸಿದ್ದೀಖ್ ಸಖಾಫಿ ಬಾಯಾರ್, ಅಬ್ದುರ್ರಶೀದ್ ಝೈನಿ ಕಕ್ಕಿಂಜೆ, ಡಾ. ಹಾಫಿಲ್ ನಬೀರ್ ಓ.ಟಿ., ಮುಹಮ್ಮದ್ ಸಖಾಫಿ ಪಾತ್ತೂರು, ಜಬ್ಬಾರ್ ಹಾಜಿ ತಳಿಪರಂಬ್, ಅಬ್ದುಲ್ ಖಾದಿರ್ ಸಖಾಫಿ ಅಲ್ ಮದೀನಾ ಮಂಜನಾಡಿ, ಬಶೀರ್ ಮದನಿ ನೀಲಗಿರಿ, ಅಬ್ದುಲ್ ಜಲೀಲ್ ಸಖಾಫಿ ಮಾವಿಲಾಡಂ, ಮೂಸ ಸಖಾಫಿ ಕಳತ್ತೂರು, ಪ್ರೊ. ಇಸ್ಮಾಈಲ್ ಪನಕ್ಕಲ್, ರಈಸ್ ಮುಈನಿ, ರಫೀಕ್ ಅಮಾನಿ ತಟ್ಟುಂಬಲ್, ಮುಸ್ತಫಾ ಪಿ.ವಿ., ಸಿರಾಜ್ ಇರಿವೇರಿ, ಅಹ್ಮದಲಿ ಬೆಂಡಿಚ್ಚಾಲ್, ಸಿ.ಎಚ್. ಇಖ್ಬಾಲ್ ಮುಂತಾದವರು ಹಾಜರಿದ್ದರು.
ಕಾಟಿಪ್ಪಾರ ಅಬ್ದುಲ್ ಖಾದಿರ್ ಸಖಾಫಿ ಸ್ವಾಗತ ಭಾಷಣ ಮಾಡಿದರು, ಹಸೈನಾರ್ ಸಖಾಫಿ ಕುಣಿಯ ವಂದನೆ ಸಲ್ಲಿಸಿದರು.