ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗೆ ಸಿದ್ಧತೆ : ಕಾಸರಗೋಡಿನಲ್ಲಿ 8 ಶಿಕ್ಷಣ ಸಂಸ್ಥೆಗಳಿಗೆ ಇಂದು (ಡಿ.8) ರಜೆ
Update: 2025-12-07 23:51 IST
ಸಾಂದರ್ಭಿಕ ಚಿತ್ರ | PC : freepik
ಕಾಸರಗೋಡು, ಡಿ.7: ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗೆ ಸಂಬಂಧಿಸಿ ಮತದಾನ ಸಾಮಗ್ರಿ ವಿತರಣೆ ಕೇಂದ್ರ ಮತ್ತು ಮತ ಎಣಿಕೆ ಕೇಂದ್ರಗಳಾಗಿ ಗುರುತಿಸಿರುವ ಶಿಕ್ಷಣ ಸಂಸ್ಥೆಗಳನ್ನು ಸಜ್ಜು ಗೊಳಿಸಬೇಕಾಗಿದೆ. ಅದಕ್ಕಾಗಿ ಅಂತಹ ಶಾಲೆ-ಕಾಲೇಜುಗಳಿಗೆ ಡಿ.8ರಂದು ರಜೆ ಘೋಷಿಸಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಆದೇಶಿಸಿದ್ದಾರೆ.
ಕುಂಬಳೆ ಸರಕಾರಿ ಹಯರ್ ಸೆಕೆಂಡರಿ ಶಾಲೆ, ಕಾಸರಗೋಡು ಸರಕಾರಿ ಕಾಲೇಜು, ಬೋವಿಕ್ಕಾನ ಹಯರ್ ಸೆಕೆಂಡರಿ ಶಾಲೆ, ಕಾಞಂಗಾಡ್ ದುರ್ಗಾ ಹಯರ್ ಸೆಕೆಂಡರಿ ಶಾಲೆ, ನೀಲೇಶ್ವರ ರಾಜಾಸ್ ಹಯರ್ ಸೆಕೆಂಡರಿ ಶಾಲೆ, ಪಡನ್ನಕ್ಕಾಡ್ ನೆಹರೂ ಕಾಲೇಜು, ಪರಪ್ಪ ಜಿಎಚ್‌ಎಸ್ ಶಾಲೆ ಮತ್ತು ಹೊಸದುರ್ಗ ಹಯರ್ ಸೆಕೆಂಡರಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಡಿ.11ರಂದು ಜಿಲ್ಲೆಯ 18 ಜಿಪಂ ಸ್ಥಾನ, ಮೂರು ನಗರಸಭೆ, 6 ಬ್ಲಾಕ್ ಪಂಚಾಯತ್, 38 ಗ್ರಾಪಂಗಳಿಗೆ ಚುನಾವಣೆ ನಡೆಯಲಿದೆ.