×
Ad

ಸೆ. 10 ರಂದು ಸಿರಿಬಾಗಿಲು ಪ್ರತಿಷ್ಠಾನದಲ್ಲಿ ಉಚಿತ ಆರೋಗ್ಯ ತಪಾಸಣೆ

Update: 2023-09-07 10:19 IST

ಕಾಸರಗೋಡು: ಸಾಂಸ್ಕೃತಿಕ ಕ್ಷೇತ್ರದಲ್ಲಿ ಜನಪ್ರಿಯವಾದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ನೇತೃತ್ವದಲ್ಲಿ ಕಾಸರಗೋಡಿನ ನಾಗರಿಕರಿಗಾಗಿ- ಕಲಾವಿದರಿಗಾಗಿ, ಕೆ.ಯಂ.ಸಿ.ಹಾಸ್ಪಿಟಲ್, ಅತ್ತಾವರ, ಮಂಗಳೂರು ಇವರಿಂದ ಪ್ರಸಿದ್ದ ವೈದ್ಯರುಗಳ ನೇತೃತ್ವದಲ್ಲಿ ಉಚಿತವಾಗಿ ವೈದ್ಯಕೀಯ ತಪಾಸಣೆ ಸೆಪ್ಟೆಂಬರ್ 10 ರಂದು ರವಿವಾರ ಬೆಳಗ್ಗೆ 9 ಗಂಟೆಯಿಂದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮವನ್ನು ಕಾಸರಗೋಡಿನ ಹಿರಿಯ ವೈದ್ಯರಾದ ಡಾ. ಬಿ.ಯಸ್. ರಾವ್ ಅವರು ಉಧ್ಘಾಟಿಸಲಿರುವರು. ಕೆ.ಯಂ.ಸಿ. ಯ ವೈದ್ಯರಾದ ಹೃದಯ ರೋಗ ತಜ್ಞ ಡಾ.ಪದ್ಮನಾಭ ಕಾಮತ್, ಮಣಿಪಾಲ ಕೆ.ಯಂ.ಸಿ.ಯ ಶೈಲಜಾ, ನೇತ್ರ ತಜ್ಞರು, ಹಾಗು ಕ್ಯಾನ್ಸರ್ ತಜ್ಞರಾದ ಡಾ.ಅಭಿಷೇಕ್ ಕೃಷ್ಣ ಭಾಗವಹಿಸಲಿದ್ದಾರೆ. ಡಾ.ನಾರಾಯಣ ಮಧೂರು,ಡಾ.ರಾಜಾರಾಮ ಭಟ್ ದೇವಕಾನ ರವರ ಉಪಸ್ಥಿತಿಯಲ್ಲಿ ಕೆ.ಯಂ.ಸಿ.ಯ 10 ಕ್ಕೂ ಹೆಚ್ಚು ವೈದ್ಯರು ಭಾಗವಹಿಸಲಿದ್ದಾರೆ.

ಹೃದಯ ರೋಗ ವಿಭಾಗ, ಸಾಮಾನ್ಯ ರೋಗ ವಿಭಾಗ, ಎಲುಬು ಮತ್ತು ಕೀಲು ರೋಗ, ಕಿವಿ.ಮೂಗು ,ಗಂಟಲು ವಿಭಾಗ, ಕಣ್ಣಿನ ವಿಭಾಗ, ಚರ್ಮ ರೋಗ ತಪಾಸಣೆ ಕ್ಯಾನ್ಸರ್ ತಪಾಸಣೆ ಮತ್ತು ಮಾಹಿತಿ ನಡೆಯಲಿರುವುದು,ಅಲ್ಲದೆ ಅಗತ್ಯ ಇರುವ ಮೆಡಿಸಿನ್ ಸ್ಥಳದಲ್ಲಿ ಲಭ್ಯ ವಿರುತ್ತದೆ.Kmc ಆರೋಗ್ಯ ಕಾರ್ಡು ಮತ್ತು ಲಾಯಲ್ಟಿ ಕಾರ್ಡ್ ನೋಂದಾವಣೆಯೂ ಈ ಸಂದರ್ಭದಲ್ಲಿ ನಡೆಯಲಿದೆ. ಇದರಿಂದಾಗಿ Rs.35000 ವರೆಗಿನ ಆರೋಗ್ಯ ವಿಮೆ ಸೌಲಭ್ಯ ವು ಫಲಾನುಭವಿಗಳಿಗೆ ದೊರೆಯುತ್ತದೆ. ಟೋಕನ್ ಪಡೆಯಲು ಸೆಪ್ಟೆಂಬರ್ 7,8,9 ರಂದು ಸಂಜೆ 5 ಗಂಟೆ ನಂತರ ಫೋನ್ ಸಂಖ್ಯೆ  9448344380, 8073740237, 8547463158 ಗೆಸಂಪರ್ಕಿಸಬೇಕೆಂದು ಪ್ರತಿಷ್ಠಾನವು ಪ್ರಕಟನೆಯಲ್ಲಿ ತಿಳಿಸಿದೆ. 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News