×
Ad

ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನದ ವತಿಯಿಂದ ಪುರಂದರದಾಸರ "ಅನಸೂಯಾ ಚರಿತ್ರೆ" ಯಕ್ಷಗಾನ ಕೃತಿ ಲೋಕಾರ್ಪಣೆ

Update: 2025-10-20 14:34 IST

ಕಾಸರಗೋಡು, ಒ. 18:  ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಪ್ರಕಟಿಸಿದ ಶ್ರೀ ಪುರಂದರದಾಸರು ರಚಿಸಿದ "ಅನಸೂಯಾ ಚರಿತ್ರೆ" ಎಂಬ ಯಕ್ಷಗಾನ ಪ್ರಸಂಗ ಕೃತಿ ಬಿಡುಗಡೆ ಕಾರ್ಯಕ್ರಮ ಶನಿವಾರ ನಡೆಯಿತು.

ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಅವರು ಸಂಪಾದಿಸಿದ ಕೃತಿಯನ್ನು ಸುಬ್ರಮಣ್ಯ ಮಠದ ಶ್ರೀಮದ್ಜಗದ್ಗುರು ಮಧ್ವಾಚಾರ್ಯ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದಂಗಳವರು ಲೋಕಾರ್ಪಣೆಗೊಳಿಸಿದರು.

ಸಭಾಧ್ಯಕ್ಷತೆಯನ್ನು ಡಾ. ಪಿ. ದಯಾನಂದ ಪೈ ವಹಿಸಿದ್ದರು. ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಅತಿಥಿಗಳನ್ನು ಸ್ವಾಗತಿಸಿದರು.  ಡಾ. ಕಬ್ಬಿನಾಲೆ ವಸಂತ ಭಾರದ್ವಾಜರು ಕೃತಿ ಪರಿಚಯ ಮಾಡಿದರು.

ಮುಖ್ಯ ಅತಿಥಿಗಳಾಗಿ ಡಾ. ಎಂ. ಪ್ರಭಾಕರ ಜೋಶಿ, ಮಂಗಳೂರು ವಿವಿಯ ನಿರ್ದೇಶಕ ಡಾ. ಧನಂಜಯ ಕುಂಬಳೆ, ಪಿ. ಸತೀಶ್ ಪೈ, ಕೃಷ್ಣ ಶರ್ಮಾ ಆಗಮಿಸಿದ್ದರು.

ನಂತರ ಅನಸೂಯಾ ಚರಿತ್ರೆ ಪ್ರಸಂಗದ ಗಾನ ಪ್ರಸ್ತುತಿ ನಡೆಯಿತು. ಹಿರಿಯ ಭಾಗವತರಾದ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಪುಂಡಿಕಾಯಿ ಗೋಪಾಲಕೃಷ್ಣ ಭಟ್, ತಲ್ಪನಾಜೆ ವೆಂಕಟ್ರಮಣ ಭಟ್, ಕುಮಾರಿ ಹೇಮ ಸ್ವಾತಿ ಕುರಿಯಾಜೆಯವರ ಭಾಗವತಿಕೆ, ಚೆಂಡೆ - ಮದ್ದಳೆಯಲ್ಲಿ, ಹಿರಿಯ ಮದ್ದಳೆಗಾರರಾದ ಪದ್ಯಾಣ ಶಂಕರನಾರಾಯಣ ಭಟ್, ಮಧೂರು ಗೋಪಾಲಕೃಷ್ಣ ನಾವಡ, ರಾಮಮೂರ್ತಿ ಕುದುರೆಕ್ಕೋಡ್ಲು ಹಾಗೂ ರಾಜ ಮಯ್ಯ ಚಕ್ರತಾಳದಲ್ಲಿ ಸಹಕರಿಸಿದರು. ಉದಯೋನ್ಮುಖ ಭಾಗವತೆ ಹೇಮಸ್ವಾತಿ ಕುರಿಯಾಜೆಯವರ ಭಾಗವತಿಕೆ ಎಲ್ಲರ ಗಮನ ಸೆಳೆಯಿತು. ವಸಂತ ಭಾರದ್ವಾಜರು ಗಾನಪ್ರಸ್ತುತಿಯ ನಿರ್ವಹಣೆ ಮಾಡಿದರು.

ರಾಜಗೋಪಾಲ ಕನ್ಯಾನ ಕಾರ್ಯಕ್ರಮವನ್ನು ನಿರ್ವಹಿಸಿದರು. ಜಯಲಕ್ಷ್ಮಿ ಆರ್. ಹೊಳ್ಳ ಧನ್ಯವಾದವಿತ್ತರು.

 

 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News