ಜು.17ರಂದು ಕಾಸರಗೋಡು ಜಿಲ್ಲೆಯ ಶಾಲಾ - ಕಾಲೇಜುಗಳಿಗೆ ರಜೆ
Update: 2025-07-16 19:19 IST
ಕಾಸರಗೋಡು : ಭಾರೀ ಮಳೆ ಹಾಗೂ ಪ್ರವಾಹದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜು.17ರಂದು ಕಾಸರಗೋಡು ಜಿಲ್ಲೆಯ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಕೆ . ಇಂಪಾಶೇಖರ್ ಆದೇಶ ನೀಡಿದ್ದಾರೆ.
ಶಾಲಾ- ಕಾಲೇಜು, ವೃತ್ತಿಪರ ಕಾಲೇಜು, ಕೇಂದ್ರ ವಿದ್ಯಾಲಯ, ಟ್ಯೂಷನ್ ಕೇಂದ್ರಗಳು, ಮದ್ರಸ, ಅಂಗನವಾಡಿ ಮೊದಲಾದವುಗಳಿಗೆ ರಜೆ ಅನ್ವಯವಾಗಲಿದೆ. ಪೂರ್ವನಿಗದಿತ ಪರೀಕ್ಷೆಗಳು ಎಂದಿನಂತೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.