×
Ad

ಕಾಞಂಗಾಡ್: ಮೋರಿ ನಿರ್ಮಾಣಕ್ಕೆ ರಸ್ತೆಯಲ್ಲಿ ತೋಡಿದ್ದ ಹೊಂಡಕ್ಕೆ ಬಿದ್ದು ವ್ಯಕ್ತಿ ಮೃತ್ಯು

Update: 2023-11-04 15:57 IST

ಕಾಸರಗೋಡು, ನ.4: ಮೋರಿ ನಿರ್ಮಿಸಲು ರಸ್ತೆಯಲ್ಲಿ ತೋಡಲಾಗಿದ್ದ ಹೊಂಡಕ್ಕೆ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಕಾಙಂಗಾಡ್ ಸಮೀಪದ ಕೊವ್ವಲ್ ಪಳ್ಳಿ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಅಂಬಲತ್ತರ ಪಾರಪಳ್ಳಿ ನಿವಾಸಿ ನಿದೀಶ್ (40) ಮೃತಪಟ್ಟವರು.

ಅಲಾಮಿಪಳ್ಳಿಯಲ್ಲಿರುವ ಬಾರ್ ವೊಂದರಲ್ಲಿ ಕ್ಲೀನಿಂಗ್ ಕಾರ್ಮಿಕರಾಗಿದ್ದ ನಿದೀಶ್ ಅವರ ಮೃತದೇಹ ರಸ್ತೆಯಲ್ಲಿ ಮೋರಿ ನಿರ್ಮಾಣಕ್ಕಾಗಿ ತೋಡಿದ್ದ ಹೊಂಡದಲ್ಲಿ ತುಂಬಿದ್ದ ನೀರಿನಲ್ಲಿ ಮುಳುಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ನಿದೀಶ್ ಕಳೆದ ರಾತ್ರಿ 11 ಗಂಟೆಗೆ ಬಾರ್ ನಲ್ಲಿ ಕೆಲಸ ಮುಗಿಸಿ ಮನೆಗೆ ತೆರಳಿದ್ದರು. ತಡರಾತ್ರಿಯಾದರೂ ಅವರು ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಶೋಧ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ಇಂದು ಬೆಳಗ್ಗೆ ಹೊಂಡದಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೊಸದುರ್ಗ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News