×
Ad

ಕಾಸರಗೋಡು: ಸಅದಿಯ್ಯದಲ್ಲಿ ಸನದುದಾನ ಸಮಾರಂಭದೊಂದಿಗೆ ಆಂಡ್ ನೇರ್ಚೆ ಸಮಾಪ್ತಿ

Update: 2025-10-22 14:46 IST

ಸಮಸ್ತ ಅಧ್ಯಕ್ಷ ಇ. ಸುಲೈಮಾನ್ ಮುಸ್ಲಿಯಾರ್ ಸಅದಿಯ್ಯ ಆಂಡ್ ನೇರ್ಚೆಯ ಸನದುದಾನ ಸಮಾರೋಪ ಸಮ್ಮೇಳನವನ್ನು ಉದ್ಘಾಟಿಸುತ್ತಿರುವುದು.

ಕಾಸರಗೋಡು: ಜಾಮಿಅ ಸಅದಿಯ್ಯ ಅರಬಿಯ್ಯದಲ್ಲಿ ನಡೆದ ತಾಜುಲ್ ಉಲಮಾ ಉಳ್ಳಾಳ್ ತಂಙಳ್ ಮತ್ತು ನೂರುಲ್ ಉಲಮಾ ಎಂ. ಎ. ಉಸ್ತಾದ್ ಅವರ ಆಂಡ್ ನೇರ್ಚೆ, ಸನದ್‌ದಾನ ಸಮ್ಮೇಳನ ದೊಂದಿಗೆ ಸಮಾರೋಪ ಗೊಂಡಿತು.

ಈ ಸಮಾರಂಭದಲ್ಲಿ 213 ಯುವ ಪಂಡಿತರು ಧಾರ್ಮಿಕ ಶಿಕ್ಷಣ ಪೂರ್ಣಗೊಳಿಸಿ ಸನದ್ ಸ್ವೀಕರಿಸಿದರು. ಇವರಲ್ಲಿ 160 ಸಅದಿಗಳು, 50 ಅಫ಼್ಲಲಿಗಳು, ಮತ್ತು 10 ಹಾಫಿಳ್‌ಗಳು ಇದ್ದರು. ಸಾವಿರಾರು ಮಂದಿ ಭಾಗವಹಿಸಿದ ಈ ಸಮ್ಮೇಳನವು ಭವ್ಯವಾಗಿ ನೆರವೇರಿತು.

ಕಾರ್ಯಕ್ರಮದ ಪ್ರಾರಂಭ ಪ್ರಾರ್ಥನೆ ಸಯ್ಯಿದ್ ಅಲಿ ಬಾಫಖಿ ತಂಙಳ್ ನಡೆಸಿದರು. ‌ಉಪಾಧ್ಯಕ್ಷ ಕೆ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಪಟ್ಟುವಂ ಅವರ ಅಧ್ಯಕ್ಷತೆಯಲ್ಲಿ ಸಮಸ್ತ ಅಧ್ಯಕ್ಷರಾದ ಇ. ಸುಲೈಮಾನ್ ಮುಸ್ಲಿಯಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಅದಿಯ್ಯ ಜನರಲ್ ಸೆಕ್ರಟರಿ ಎ.ಪಿ. ಅಬ್ದುಲ್ಲ ಮುಸ್ಲಿಯಾರ್ ಮಾಣಿಕ್ಕೋತ್ ಸನದುದಾನ ಭಾಷಣ ಮಾಡಿದರು. ಸಯ್ಯಿದ್ ಇಬ್ರಾಹೀಮುಲ್ ಖಲೀಲ್ ಅಲ್ ಬುಖಾರಿ ಅನುಸ್ಮರಣಾ ಪ್ರಭಾಷಣ ಮಾಡಿದರು. ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ಅಲ್ ಬುಖಾರಿ, ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ, ಕೂಟಂಬಾರ ಅಬ್ದುಲ್ ರಹ್ಮಾನ್ ದಾರಿಮಿ, ಕಲ್ಲಟ್ರ ಮಾಹಿನ್ ಹಾಜಿ ಮೊದಲಾದವರು ಮಾತನಾಡಿದರು.

ಕಲ್ಲಟ್ರ ಅಬ್ದುಲ್ ಖಾದಿರ್ ಹಾಜಿ ಸ್ಮಾರಕ ಪ್ರಶಸ್ತಿ ಸಯ್ಯಿದ್ ಇಬ್ರಾಹೀಮುಲ್ ಖಲೀಲ್ ಅಲ್ ಬುಖಾರಿ ಅವರು ತಾಯಲ್ ಅಬೂಬಕ್ಕರ್ ಹಾಜಿ ಮಾಣಿಕ್ಕೋತ್ ಅವರಿಗೆ ಪ್ರದಾನಿಸಿದರು. ಡಾ. ಅಬ್ದುಲ್ ಹಕೀಂ ಅಝ್ಹರಿ ಅಭಿನಂದನಾ ಭಾಷಣ ಮಾಡಿದರು.

ಡಾ. ಟಿ.ಪಿ. ಮೊಹಮ್ಮದ್ ಹಾರಿಸ್, ಕುಣಿಯ ಇಬ್ರಾಹೀಂ ಹಾಜಿ, ಮತ್ತು ಮಂಗಳೂರು ಸಾಗರ್ ಮುಹಮ್ಮದ್ ಹಾಜಿ ಸೇರಿದಂತೆ ಅನೇಕರು ವಿಶೇಷವಾಗಿ ಸನ್ಮಾನಿಸಲ್ಪಟ್ಟರು.

ಕಾರ್ಯಕ್ರಮದಲ್ಲಿ ಹಸನ್ ಮುಸ್ಲಿಯಾರ್ (ವಯನಾಡು), ಸಯ್ಯಿದ್ ಝೈನುಲ್ ಆಬಿದೀನ್ ಅಲ್ ಅಹ್ದಲ್ (ಕಣ್ಣವಂ), ಸಯ್ಯಿದ್ ಮುನೀರುಲ್ ಅಹ್ದಲ್, ಸಯ್ಯಿದ್ ಪಿ.ಎಸ್. ಆಟ್ಟಕೋಯ ತಂಙಳ್ ಬಾಹಸನ್ ಪಂಜಿಕ್ಕಲ್, ಸಯ್ಯಿದ್ ಇಂಬಿಚ್ಚಿ ತಂಙಳ್ ಖಲೀಲ್ ಸಲಾಹ್, ಸಯ್ಯಿದ್ ಯುಪಿಎಸ್ ತಂಙಳ, ಪಿ.ಪಿ. ಉಬೈದುಲ್ಲಾ ಸಅದಿ, ಕೆ.ಕೆ. ಹುಸೈನ್ ಬಾಖವಿ, ಮುಹಮ್ಮದಲಿ ಸಖಾಫಿ (ತೃಕರಿಪೂರ್), ಬಿ.ಎಸ್. ಅಬ್ದುಲ್ಲಕುಂಞಿ ಫೈಝಿ, ಸ್ವಾಲಿಹ್ ಸಅದಿ, ಕುಟ್ಟಶೇರಿ ಅಬ್ದುಲ್ಲ ಬಾಖವಿ, ಪಳ್ಳಂಗೋಡ್ ಅಬ್ದುಲ್ ಖಾದಿರ್ ಮದನಿ, ಅಲಿಕುಂಞಿ ದಾರಿಮಿ, ಅಬ್ದುಲ್ ರಶೀದ್ ದಾರಿಮಿ, ಮುತ್ತಿಲ್ ಮುಹಮ್ಮದ್ ಕುಂಞಿ ಮುಸ್ಲಿಯಾರ್, ಅಹ್ಮದ್ ಕೆ. ಮಣಿಯೂರ್, ಅಬ್ದುಲ್ ಗಫ್ಫಾರ್ ಸಅದಿ (ರಂಡತ್ತಾಣಿ), ಎಂ.ಎ. ಅಬ್ದುಲ್ ವಹ್ಹಾಬ್ (ತೃಕರಿಪೂರ್), ಮ‌ರ್ಝೂಕ್ ಸಅದಿ (ಪಾಪಿನಿಶ್ಶೇರಿ), ಅಬ್ದುಲ್ ರಶೀದ್ (ನರಿಕ್ಕೋಡ್), ಹನೀಫ್ ಹಾಜಿ (ಉಳ್ಳಾಳ್), ಅಬ್ದುರ್ರಹ್ಮಾನ್ ಹಾಜಿ (ತಾಯಲ್), ಅಬ್ದುರ್ರಹ್ಮಾನ್ ಹಾಜಿ (ಬಹ್ರೈನ್), ಮುಲ್ಲಚೇರಿ ಅಬ್ದುಲ್ ಖಾದಿರ್ ಹಾಜಿ, ಹಾಜಿ ಅಬ್ದುಲ್ಲ ಹುಸೈನ್ (ಕಡವತ್), ಶಾಫಿ ಹಾಜಿ (ಕೀಯೂರು), ಅಬ್ದುಲ್ ಖಾದಿರ್ ಹಾಜಿ (ರಿಫಾಈ), ಇಬ್ರಾಹೀಂ ಹಾಜಿ (ಕಲ್ಲಟ್ರ), ಮೊಯ್ದು ಸಅದಿ (ಚೇರೂರ್), ಮುಹಮ್ಮದ್ ಸಖಾಫಿ (ಪಾತೂರು), ವಿ.ಪಿ. ಅಬ್ದುಲ್ಲ ಫೈಝಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಕೆ.ಪಿ. ಹುಸೈನ್ ಸಅದಿ ಸ್ವಾಗತ ಭಾಷಣ ಮಾಡಿದರು, ಕೊಲ್ಲಂಬಾಡಿ ಅಬ್ದುಲ್ ಖಾದಿರ್ ಸಅದಿ ಧನ್ಯವಾದ ಅರ್ಪಿಸಿದರು.

 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News