ಕಾಸರಗೋಡು: ಹಿರಿಯ ಕಾಂಗ್ರೆಸ್ ನಾಯಕ, ಉದ್ಯಮಿ ಕೆ. ಮೊಯ್ದೀನ್‌ಕುಟ್ಟಿ ಹಾಜಿ ನಿಧನ

Update: 2026-07-22 09:28 IST

ಕಾಸರಗೋಡು : ಲೋಕೋಪಯೋಗಿ ಗುತ್ತಿಗೆದಾರ , ಉದ್ಯಮಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ, ಸಾಮಾಜಿಕ ಮುಖಂಡರಾಗಿದ್ದ ಚಟ್ಟಂಚಾಲ್ ಪಟ್ಟುವಾತಿಲ್ ನಿವಾಸಿ ಕೆ. ಮೊಯ್ದೀನ್‌ಕುಟ್ಟಿ ಹಾಜಿ (92) ಅವರು ಮಂಗಳವಾರ ರಾತ್ರಿ ಕಾಸರಗೋಡಿನ ಆಸ್ಪತ್ರೆಯಲ್ಲಿ ನಿಧನರಾದರು.

ಚಟ್ಟಂಚಾಲ್ ಎಂಜಿನಿಯರಿಂಗ್ ಇಂಡಸ್ಟ್ರೀಸ್‌ನ ಮಾಲೀಕರಾಗಿದ್ದ ಕೆ. ಮೊಯ್ದೀನ್‌ಕುಟ್ಟಿ ಹಾಜಿ ಅವರು, ಚೆಮ್ನಾಡ್ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರಾಗಿ ಸಾರ್ವಜನಿಕ ರಂಗದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದರು. ಚಟ್ಟಂಚಾಲ್ ಜುಮಾ ಮಸೀದಿಯ ಅಧ್ಯಕ್ಷರಾಗಿ ಹಾಗೂ ಕೀಳೂರು ಸಂಯುಕ್ತ ಜಮಾಅತ್‌ನ ಖಜಾಂಚಿಯಾಗಿ ದೀರ್ಘಕಾಲ ಕಾರ್ಯನಿರ್ವಹಿಸಿದ್ದರು. ಸಮಾಜದ ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿ ಜನಾನುರಾಗಿಯಾಗಿದ್ದರು.

ಚಟ್ಟಂಚಾಲ್ ಹೈಯರ್ ಸೆಕೆಂಡರಿ ಶಾಲೆಯ ಮಾಜಿ ವ್ಯವಸ್ಥಾಪಕರೂ ಆಗಿದ್ದ ಅವರ ನಿಧನದ ಹಿನ್ನೆಲೆಯಲ್ಲಿ ಶಾಲೆಗೆ ಬುಧವಾರ ರಜೆ ಘೋಷಿಸಲಾಗಿದೆ.

ಮೃತರ ನಿಧನಕ್ಕೆ ಜಿಲ್ಲೆಯ ಹಲವು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News