ಕಾಸರಗೋಡು: ಎರಡು ಬೈಕ್‌ಗಳು ಢಿಕ್ಕಿ; ಓರ್ವ ಸವಾರ ಮೃತ್ಯು
Update: 2025-07-21 14:13 IST
ಕಾಸರಗೋಡು: ಎರಡು ಬೈಕ್ ಗಳ ನಡುವೆ ಉಂಟಾದ ಅಪಘಾತದಲ್ಲಿ ಓರ್ವ ಮೃತಪಟ್ಟ ಘಟನೆ ಬೋವಿಕ್ಕಾನ ಸಮೀಪ ಪೊವ್ವಲ್ ಎಂಬಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
ಮೂಲಡ್ಕ ದ ಬಿ.ಕೆ ಕಬೀರ್ (44) ಮೃತಪಟ್ಟವರು. ಕಬೀರ್ ಗುತ್ತಿಗೆದಾರ ರಾಗಿ ಸೇವೆ ಸಲ್ಲಿಸುತ್ತಿದ್ದರು. ಬೆಳಿಗ್ಗೆ ಮನೆಯಿಂದ ಬೈಕ್ ನಲ್ಲಿ ಬೋವಿಕ್ಕಾನ ಕಡೆಗೆ ತೆರಳುತ್ತಿದ್ದಾಗ ಮುಳ್ಳೇರಿಯದಿಂದ ಕಾಸರಗೋಡು ಭಾಗಕ್ಕೆ ಬರುತಿದ್ದ ಇನ್ನೊಂದು ಬೈಕ್ ಪೊವ್ವಲ್ ಕಾಲೇಜು ಬಳಿ ಢಿಕ್ಕಿ ಹೊಡೆದಿದೆ. ಹೊಡೆತದ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಕಬೀರ್ ಅವರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ ಎಂದು ತಿಳಿದು ಬಂದಿದೆ.
ಪೊವ್ವಲ್ ಎಲ್. ಬಿ. ಎಸ್ ಕಾಲೇಜು ಸಮೀಪ ನಿರ್ಮಿಸಿದ್ದ ಕಬೀರ್ ಅವರ ಹೊಸ ಮನೆಯ ಗೃಹ ಪ್ರವೇಶ ನಿನ್ನೆ (ರವಿವಾರ) ಯಷ್ಟೇ ನಡೆದಿತ್ತು. ಮರುದಿನ ಸೋಮವಾರ ಬೆಳಿಗ್ಗೆ ಮನೆಯಿಂದ ಬೋವಿಕ್ಕಾನ ಪೇಟೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಆದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.