×
Ad

ಕುಂಬಳೆ: ಕ್ಷುಲಕ ಕಾರಣಕ್ಕೆ ವಿದ್ಯಾರ್ಥಿಗಳ ಗುಂಪು ಘರ್ಷಣೆ; ಓರ್ವನ ಬಂಧನ

Update: 2025-06-20 14:14 IST

ಇಸ್ಮಾಯಿಲ್ ರಿಯಾಝ್

ಕಾಸರಗೋಡು: ಕ್ಷುಲಕ ಕಾರಣಕ್ಕಾಗಿ ಕುಂಬಳೆಯಲ್ಲಿ ನಡೆದ ವಿದ್ಯಾರ್ಥಿ ಗುಂಪುಗಳ ನಡುವಿನ ಹೊಡೆದಾಟಕ್ಕೆ ಸಂಬಂಧಿಸಿದಂತೆ  ಓರ್ವನನ್ನು ಬಂಧಿಸಿದ ಘಟನೆ ಗುರುವಾರ ನಡೆದಿದೆ.

ಉಪ್ಪಳ ಗೇಟ್ ಸಮೀಪದ ಇಸ್ಮಾಯಿಲ್ ರಿಯಾಝ್ ( 20) ಬಂಧಿತ ಯುವಕ. ಗುರುವಾರ ಸಂಜೆ 4.30 ರ ಸುಮಾರಿಗೆ ಕುಂಬಳೆ ಮಾರುಕಟ್ಟೆ ರಸ್ತೆಯಲ್ಲಿ  ಹತ್ತನೇ ತರಗತಿ ಹಾಗೂ ಪ್ಲಸ್ ಟು ವಿದ್ಯಾರ್ಥಿಗಳ ಗುಂಪುಗಳ ನಡುವೆ ಈ ಘರ್ಷಣೆ ನಡೆದಿದ್ದು, ಹೊರಗಿನಿಂದ ಬಂದ ಗುಂಪು ಕೂಡಾ ಹೊಡೆದಾಟದಲ್ಲಿ ಭಾಗಿಯಾಗಿತ್ತು ಎನ್ನಲಾಗಿದೆ.

 ವರ್ತಕರು ಹಾಗೂ ಮೀನು ಮಾರಾಟಗಾರರು ಮನವೊಲಿಸಲು ಯತ್ನಿಸಿದರೂ ವಿಫಲಗೊಂಡ ಹಿನ್ನಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಗುಂಪನ್ನು ಚದುರಿಸಿ ಘರ್ಷಣೆ ಯನ್ನು ನಿಯಂತ್ರಿಸಿದರು. ಘಟನೆಗೆ ಸಂಬಂಧಪಟ್ಟಂತೆ 15 ವಿದ್ಯಾರ್ಥಿಗಳು ಹಾಗೂ 10 ಹೊರಗಿಂದ ಬಂದ ತಂಡದ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದು, ತಲೆಮರೆಸಿಕೊಂಡ ವಿದ್ಯಾರ್ಥಿಗಳಿಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಈ ಹಿಂದೆಯೂ ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ನಡುವೆ ಘರ್ಷಣೆ ನಡೆದಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News