×
Ad

ಮಂಜೇಶ್ವರ | ದರೋಡೆಗೆ ಸಂಚು: ಇಬ್ಬರು ಆರೋಪಿಗಳ ಸೆರೆ; ನಾಲ್ವರು ಪರಾರಿ

Update: 2024-11-10 12:53 IST

ಮಂಜೇಶ್ವರ: ದರೋಡೆಗೆ ಸಂಚು ನಡೆಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಮಂಜೇಶ್ವರ ಠಾಣಾ ಪೊಲೀಸರು ವರ್ಕಾಡಿ ಸಮೀಪದ ಮಜೀರ್ ಪಳ್ಳ ಎಂಬಲ್ಲಿ ರವಿವಾರ ಮುಂಜಾನೆ ಬಂಧಿಸಿದ್ದಾರೆ.

ಉಳ್ಳಾಲದ ಫೈಝಲ್ ಮತ್ತು ತುಮಕೂರಿನ ಶಹೀದ್ ಅಮಾನ್ ಬಂಧಿತ ಆರೋಪಿಗಳು. ಇವರ ಜೊತೆಗಿದ್ದ ಇತರ ನಾಲ್ವರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು ಮುಂಜಾನೆ ಮೂರು ಗಂಟೆ ಸುಮಾರಿಗೆ ಮಜೀರ್ ಪಳ್ಳದಲ್ಲಿ ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದ ಕಾರೊಂದನ್ನು ಗಸ್ತು ತಿರುಗುತ್ತಿದ್ದ ಮಂಜೇಶ್ವರ ಪೊಲೀಸರು ನಿಲ್ಲಿಸಿದ್ದಾರೆ. ಅದರಲ್ಲಿದ್ದವರನ್ನು ವಿಚಾರಿಸುತ್ತಿದ್ದ ವೇಳೆ ನಾಲ್ವರು ಪರಾರಿಯಾಗಿದ್ದಾರೆ. ಇನ್ನಿಬ್ಬರನ್ನು ನಾಗರಿಕರ ಸಹಾಯದಿಂದ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆ ವೇಳೆ ಪೊಲೀಸರು ಮತ್ತು ಆರೋಪಿಗಳ ಮಧ್ಯೆ ಘರ್ಷಣೆ ನಡೆದಿದ್ದು, ಆರೋಪಿಗಳಿಬ್ಬರು ಗಾಯಗೊಂಡಿದ್ದಾರೆ. ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಂಧಿತರಿಂದ ವಶಪಡಿಸಿಕೊಂಡ ಕಾರಿನಲ್ಲಿ ಗ್ಯಾಸ್ ಕಟ್ಟರ್ , ಗ್ಯಾಸ್ ಸಿಲಿಂಡರ್ ಮೊದಲಾದವುಗಳು ಪತ್ತೆಯಾಗಿವೆ. ಈ ತಂಡವು ಬ್ಯಾಂಕ್ ಸೇರಿದಂತೆ ಹಲವು ದರೋಡೆಗೆ ಹೊಂಚು ಹಾಕುತ್ತಿದ್ದ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಪರಾರಿಯಾದವರ ಬಗ್ಗೆ ಮಾಹಿತಿ ಕಲೆ ಹಾಕಿರುವ ಪೊಲೀಸರು ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News