ಮಂಜೇಶ್ವರ| ಶಾಲಾ ಆಟೋಟ ಸ್ಪರ್ಧೆ: ಕುಸಿದು ಬಿದ್ದು ವಿದ್ಯಾರ್ಥಿ ಮೃತ್ಯು
Update: 2025-09-23 21:57 IST
ಮಂಜೇಶ್ವರ: ಶಾಲಾ ಆಟೋಟ ಸ್ಪರ್ಧೆಯ ನಡುವೆ ನಾಲ್ಕನೇ ತರಗತಿಯ ವಿದ್ಯಾರ್ಥಿ ಮೈದಾನದಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಮಂಗಲ್ಪಾಡಿ ಜಿಬಿಎಲ್‌ಪಿ ಶಾಲೆಯ ವಿದ್ಯಾರ್ಥಿ ಹಸನ್ ರಾಝಾ (10) ಮೃತಪಟ್ಟ ಬಾಲಕ. ಆಟೋಟ ಕ್ರೀಡಾ ಚಟುವಟಿಕೆ ಮಧ್ಯೆ ಕುಸಿದು ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ ಎಂದು ತಿಳಿದುಬಂದಿದೆ. ಈತ ಉತ್ತರ ಪ್ರದೇಶದ ಮೂಲದ ಇನ್ಸಾಫಾಲಿ ಎಂಬವರ ಪುತ್ರ.
ಉದ್ಯೋಗ ನಿಮಿತ್ತ ಆಗಮಿಸಿದ ವಲಸೆ ಕಾರ್ಮಿಕರ ಮಕ್ಕಳು ಕೇರಳದ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ.