×
Ad

ಮುಳ್ಳೇರಿಯ: ಬೆಂಕಿ ಆಕಸ್ಮಿಕ; ಹೊತ್ತಿ ಉರಿದ ಟ್ರಾನ್ಸ್ ಫಾರ್ಮರ್

Update: 2025-05-29 11:36 IST

ಕಾಸರಗೋಡು : ಮುಳ್ಳೇರಿಯಾ 110 ಕೆ.ವಿ ಸಬ್ ಸ್ಟೇಶನ್ ನ ಟ್ರಾನ್ಸ್ ಫಾರ್ಮರ್ ನಲ್ಲಿ ಗುರುವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, ರಾತ್ರಿ ಕರ್ತವ್ಯದಲ್ಲಿದ್ದ ಸಿಬ್ಬಂದಿ  ಬೆಂಕಿ ನಂದಿಸಲು ಪ್ರಯತ್ನಿಸಿದರೂ ವಿಫಲಗೊಂಡಿತು. ಸುದ್ದಿ ತಿಳಿದು ಕಾಸರಗೋಡಿನಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.

ಘಟನೆಯಿಂದ ಚೆರ್ಕಳ , ಮುಳ್ಳೇರಿಯಾ , ಬದಿಯಡ್ಕ , ಎರಿಂಞಿಪ್ಪುಯ ಮೊದಲಾಡೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ದುರಸ್ತಿ ಬಳಿಕ ಸಂಪರ್ಕ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News