×
Ad

ಕಾಸರಗೋಡು: ಅಂತಾರಾಜ್ಯ ಕಳವು ಪ್ರಕರಣಗಳ ಆರೋಪಿಯ ಬಂಧನ

Update: 2024-01-13 13:42 IST

ಕಾಸರಗೋಡು, ಜ.13: ಅಂತಾರಾಜ್ಯ ಕಳವು ಪ್ರಕರಣಗಳ ಆರೋಪಿಯೋರ್ವನನ್ನು ಡಿ ವೈಎಸ್ಪಿ ಪಿ.ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.

ತ್ರಿಶ್ಯೂರು ಅಂಬಲ್ಲೂರು ನಿವಾಸಿ ಶಿಬು ಪಿ.ಆರ್ (52) ಬಂಧಿತ ಆರೋಪಿ. ಈತ ಕೇರಳ ಹಾಗೂ ಕರ್ನಾಟಕದಲ್ಲಿ ಹಲವಾರು ಕಳವು ಪ್ರಕರಣಗಳ ಆರೋಪಿಯಾಗಿದ್ದಾನೆ. ಕರ್ನಾಟಕದಲ್ಲಿ

ಕಳವು ಪ್ರಕರಣಗಳ ಆರೋಪಿಯಾಗಿರುವ ಜೈಲು ವಾಸ ಅನುಭವಿಸಿದ್ದ ಈತ ಕಳೆದ ನವಂಬರ್ 16ರಂದು ಬಿಡುಗಡೆಗೊಂಡಿದ್ದನು.

ಜನವರಿ 6ರಂದು ಚಂದೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿ ಶಿಬುವನ್ನು ಇಂದು ಪೊಲೀಸರು ಬಂಧಿಸಿದ್ದಾರೆ.

ಪಯಂಗಡಿ, ತಲಶ್ಯೇರಿ, ಮಾಹೆ, ಕರ್ನಾಟಕದ ಸುಳ್ಯ, ಉಡುಪಿ ಅಲ್ಲದೆ ಹೊಸದುರ್ಗ, ಬೇಕಲ, ಚಂದೇರ, ಕಣ್ಣೂರು, ವಳಪಟ್ಟಣ, ತಳಿಪರಂಬ, ಮಟ್ಟನ್ನೂರು, ಬಾಲಶ್ಸೇರಿ, ಪಾಲಕ್ಕಾಡ್, ಕೋಝಿಕ್ಕೋಡ್ ಮೊದಲಾದ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News