×
Ad

ಮಂಜೇಶ್ವರ: ರಸ್ತೆ ದಾಟಲು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಪ್ರತಿಭಟನೆ

Update: 2024-03-10 20:29 IST

ಮಂಜೇಶ್ವರ: ರಾಗಂ ಜಂಕ್ಷನ್‌ನಲ್ಲಿ ರಸ್ತೆ ದಾಟಲು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ಬೆಂಬಲ ವ್ಯಕ್ತಪಡಿಸಲು ಕೇರಳ ಮುಸ್ಲಿಂ ಜಮಾತ್, ಎಸ್‌ಎಸ್‌ಎಫ್, ಎಸ್‌ವೈಎಸ್ ಮಂಜೇಶ್ವರಂ ವೃತ್ತದ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ಹಾಗೂ ಸಭೆಯಲ್ಲಿ ಭಾಗವಹಿಸಿದರು.

ಎಸ್ ವೈ ಎಸ್ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರೀಂ ಮಾಸ್ಟರ್ ದರ್ಬಾರ್ ಕಟ್ಟೆ, ಎಸ್ ವೈ ಎಸ್ ಮಂಜೇಶ್ವರ ವಲಯ ಕಾರ್ಯದರ್ಶಿ ಯಾಕೂಬ್ ನೌಮಿ, ರಫೀಕ್ ಜುಹರಿ, ಎಸ್ ವೈ ಎಸ್ ಮಂಜೇಶ್ವರ ವಲಯ ಕಾರ್ಯದರ್ಶಿ ಸನಾವುಲ್ಲಾ ತಂಙಳ್, ಕಾರ್ಯದರ್ಶಿ ಅಬೂ ಸ್ವಲಹಿ, ದವಾ ಕಾರ್ಯದರ್ಶಿ ಸಯ್ಯದ್ ಝಕರಿಯಾ ತಂಙಳ್ ಮೊದಲಾದವರು ಮಾತನಾಡಿದರು.




 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News