×
Ad

ಬಂದ್ಯೋಡ್: ಶಿಹಾಬ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ ನ ನೂತನ ಬ್ಲಾಕ್ ಉದ್ಘಾಟನೆ

Update: 2024-04-01 22:55 IST

ಉಪ್ಪಳ, ಎ.1: ಅಡ್ಕ ಬಂದ್ಯೋಡ್‌ ನಲ್ಲಿರುವ ಶಿಹಾಬ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ ನ ನೂತನ ‘ಆಝಾದ್’ ಬ್ಲಾಕ್ ಹಾಗೂ ಲಿಫ್ಟ್ ಉದ್ಘಾಟನೆ ಕಾರ್ಯಕ್ರಮ ರವಿವಾರ ನಡೆಯಿತು.


ನೂತನ ಬ್ಲಾಕ್‌ ನ್ನು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಉದ್ಘಾಟಿಸಿದರು. ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಲಿಫ್ಟ್‌ ನ್ನು ಉದ್ಘಾಟಿಸಿದರು. ಕರ್ನಾಟಕ ಮುಖ್ಯಮಂತ್ರಿಯ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ.ಯೆನೆಪೊಯ ಅಬ್ದುಲ್ಲಾ ಕುಂಞಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.


ಶಿಹಾಬ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿಎ ಶೇಖ್ ಅಬ್ದುಲ್ಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟಿಗಳಾದ ಸಿಎ ಆಬಿದ್ ಅಲಿ, ಎಲ್.ಕೆ.ಅತೀಕ್‌ ರ ಪತ್ನಿ ಫಾಯಿಝ ಅತೀಕ್, ಫಹಾದ್ ಖಾನ್ ಮೊದಲಾದವರು ಉಪಸ್ಥಿತರಿದ್ದರು.






















































Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News