×
Ad

ಕಾಸರಗೋಡು: ನದಿಯಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು

Update: 2024-05-28 18:09 IST

ಕಾಸರಗೋಡು: ಸಹಪಾಠಿಗಳ ಜೊತೆ ಸ್ನಾನಕ್ಕಿಳಿದ ವಿದ್ಯಾರ್ಥಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾಞಂಗಾಡ್ ನ ಆರಾಯಿ ಎಂಬಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

ಆರಾಯಿ ಬಾಕೋಟ್ ನ ಬಿ.ಕೆ. ಅಬ್ದುಲ್ ಕುಂಞಿ ಎಂಬವರ ಪುತ್ರ, ಹತ್ತನೇ ತರಗತಿಯ ವಿದ್ಯಾರ್ಥಿ ಬಿ.ಕೆ. ಮುಹಮ್ಮದ್ ಸಿನಾನ್ (16) ಮೃತ ಬಾಲಕ. ಮಂಗಳವಾರ ಬೆಳಗ್ಗೆ ಇಬ್ಬರು ಸ್ನೇಹಿತರ ಜೊತೆ ಆರಾಯಿ ನದಿಗೆ ಸ್ನಾನಕ್ಕಿಳಿದಿದ್ದು, ಸುಳಿಗೆ ಸಿಲುಕಿ ನೀರುಪಾಲಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಿಸರವಾಸಿಗಳು ಶೋಧ ನಡೆಸಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.

ಮೃತದೇಹವನ್ನು ಕಾಞ೦ಗಾಡ್ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News