ಕುವೈತ್| ಭೀಕರ ಅಗ್ನಿ ದುರಂತದಲ್ಲಿ ಕಾಸರಗೋಡು ಮೂಲದ ಇಬ್ಬರು ಮೃತ್ಯು
Update: 2024-06-12 22:38 IST
Screengrab: X/@AymanMatNews
ಕಾಸರಗೋಡು : ಕುವೈತ್ ನ ಬಹುಮಹಡಿ ಕಟ್ಟಡದಲ್ಲಿ ಬುಧವಾರ ಮುಂಜಾನೆ ಉಂಟಾದ ಭೀಕರ ಅಗ್ನಿ ಅನಾಹುತದಲ್ಲಿ ಕಾಸರಗೋಡು ಮೂಲದ ಇಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಚೆರ್ಕಳ ಕುಂಡಡ್ಕದ ರಂಜಿತ್ (34) ಹಾಗೂ ತೃಕ್ಕರಿಪುರ ಎಳಂಬಚ್ಚಿಯ ಪಿ. ಕುಂಞ ಕೇಳು (55) ಮೃತಪಟ್ಟವರು ಎಂದು ತಿಳಿದುಬಂದಿದೆ. ರಂಜಿತ್ ಕಳೆದ ಎಂಟು ವರ್ಷಗಳಿಂದ ಕುವೈತ್ ನಲ್ಲಿ ಉದ್ಯೋಗದಲ್ಲಿದ್ದರು. ಒಂದು ವರ್ಷದ ಹಿಂದೆ ಊರಿಗೆ ಬಂದು ಮರಳಿದ್ದರು.
ಚೆರ್ಕಳ - ಕುಂಡಡ್ಕದ ರವೀಂದ್ರ - ರಮಣಿ ದಂಪತಿಯ ಪುತ್ರ ಪಿ. ಕುಂಞ ಕೇಳು ಕುವೈತ್ ನ ಎನ್.ಬಿ.ಟಿ.ಸಿ ಕಂಪೆನಿಯ ಪ್ರೊಡಕ್ಷನ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ದುರಂತದಲ್ಲಿ ಕಾಸರಗೋಡಿನ ಹಲವು ಮಂದಿಗೆ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ. ದುರಂತದಲ್ಲಿ ಕೇರಳ ಮೂಲದ 11 ಮಂದಿ ಮೃತಪಟ್ಟಿದ್ದಾರೆ.