×
Ad

ಕಾಸರಗೋಡು: ಉರುಳಿಗೆ ಸಿಲುಕಿ ಚಿರತೆ ಸಾವು

Update: 2024-08-09 20:27 IST

ಕಾಸರಗೋಡು : ಉರುಳಿಗೆ ಸಿಲುಕಿ ಚಿರತೆ ಸಾವನ್ನಪ್ಪಿದ ಘಟನೆ ಆದೂರು ಸಮೀಪದ ಮಲ್ಲಂಪಾರೆಯಲ್ಲಿ ನಡೆದಿದೆ. ಅಣ್ಣಪ್ಪ ನಾಯ್ಕ್ ಎಂಬವರ ರಬ್ಬರ್ ತೋಟದಲ್ಲಿ ಉರುಳಿಗೆ ಸಿಲುಕಿದ ಸ್ಥಿತಿಯಲ್ಲಿ ಚಿರತೆ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿತ್ತು.

ಬೊಬ್ಬೆ ಕೇಳಿ ಸ್ಥಳೀಯರು ಗಮನಿಸಿದಾಗ ಚಿರತೆ ಸಿಲುಕಿರುವುದು ಕಂಡು ಬಂದಿದೆ. ಮಾಹಿತಿ ತಿಳಿದು ಬಂದಡ್ಕ ವಿಭಾಗೀಯ ಅರಣ್ಯಾಧಿಕಾರಿ ನೇತೃತ್ವದ ತಂಡವು ಸ್ಥಳಕ್ಕಾಗಮಿಸಿತ್ತು. ಚಿರತೆಯ ಸೊಂಟಕ್ಕೆ ಉರುಳು ಬಿದ್ದಿರುವುದರಿಂದ ಸಮೀಪಕ್ಕೆ ತೆರಳಲು ಸಾಧ್ಯವಾಗಲಿಲ್ಲ. ಇದರಿಂದ ಪ್ರಜ್ಞೆ ತಪ್ಪಿಸಿ ರಕ್ಷಿಸಲು ವಯನಾಡಿನ ತಂಡದ ನೆರವು ಕೋರಲಾಗಿತ್ತು.

ಆದರೆ ತಂಡವು ಆಗಮಿಸುವ ಮೊದಲೇ ಸಂಜೆ ವೇಳೆಗೆ ಚಿರತೆ ಸಾವಿಗೀಡಾಗಿದೆ. ಹಂದಿಗಾಗಿ ಇದಲಾಗಿದ್ದ ಉರುಳು ಚಿರತೆ ಸಾವಿಗೆ ಕಾರಣವಾಗಿದ್ದು , ಉರುಳು ಇರಿಸಿದ್ದು ಯಾರೆಂಬ ಬಗ್ಗೆ ಸ್ಪಷ್ಟಗೊಂಡಿಲ್ಲ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News