×
Ad

ಕಾಸರಗೋಡು: ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ

Update: 2024-10-10 17:48 IST

ಕಾಸರಗೋಡು: ಉಪ್ಪಳದಿಂದ ನಾಪತ್ತೆಯಾಗಿದ್ದ ಗುತ್ತಿಗೆದಾರನ ಮೃತದೇಹ ಕುಂಬಳೆ ಶಿರಿಯ ನದಿಯಲ್ಲಿ ಗುರುವಾರ ಮಧ್ಯಾಹ್ನ ಪತ್ತೆಯಾಗಿದೆ.

ಮಣ್ಣಂಗುಳಿಯ ಶರೀಫ್ (32) ಮೃತ ಪಟ್ಟವರು.

ಶಿರಿಯ ನದಿಯ ಕರಾವಳಿ ಪೊಲೀಸ್ ಠಾಣೆಯ ಸಮೀಪದ ನದಿ ತೀರದ ಕಾಂಡ್ಲಾ ಕಾಡಿನಲ್ಲಿ ಪತ್ತೆಯಾಗಿದೆ. ಮಂಗಳವಾರ ಸಂಜೆ ಸ್ಕೂಟರ್ ನಲ್ಲಿ ಮನೆಯಿಂದ ಹೊರಟಿದ್ದ ಶರೀಫ್ ಬಳಿಕ ನಾಪತ್ತೆಯಾಗಿದ್ದರು. ಬುಧವಾರ ಶಿರಿಯ ಸೇತುವೆ ಬಳಿ ಶರೀಫ್ ರ ಸ್ಕೂಟರ್ ಪತ್ತೆಯಾಗಿತ್ತು. ಮನೆಯವರು ಶರೀಫ್ ರ ಮೊಬೈಲ್ ಗೆ ಕರೆ ಮಾಡಿದರೂ ಸ್ವಿಚ್ಛ್ ಆಫ್ ಆಗಿತ್ತು. ಇದರಿಂದ ತಂದೆ ಇಬ್ರಾಹಿಂ ಮಂಜೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಶರೀಫ್ ಗಾಗಿ ಶೋಧ ನಡೆಸಲಾಗುತ್ತಿತ್ತು. ಈ ನಡುವೆ ಗುರುವಾರ ಮಧ್ಯಾಹ್ನ ಮೃತದೇಹ ಪತ್ತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News