×
Ad

ಕಾಸರಗೋಡು: ದರೋಡೆ ಪ್ರಕರಣ; ಪ್ರಮುಖ ಆರೋಪಿಯ ಬಂಧನ

Update: 2024-12-27 14:24 IST

ಕಾರ್ವರ್ಣನ್

ಕಾಸರಗೋಡು: ಎಟಿಎಂ‌ನಲ್ಲಿ ಹಣ ತುಂಬಿಸಲು ಬಂದ ವಾಹನದಿಂದ 50 ಲಕ್ಷ ರೂ ದರೋಡೆಗೈದ ಪ್ರಕರಣದ ಮುಖ್ಯ ಆರೋಪಿಯನ್ನು ತಮಿಳುನಾಡು ತಿರುಚ್ಚಿಯಿಂದ ವಿಶೇಷ ತನಿಖಾ ತಂಡ ಬಂಧಿಸಿದೆ.

ತಿರುಚ್ಚಿ ರಾಮ್‌ಜಿ ನಗರ ಹರಿಭಾಸ್ಕರ ಕಾಲನಿಯ ಕಾರ್ವರ್ಣನ್(28) ಬಂಧಿತ ಆರೋಪಿ.  2024 ಮಾರ್ಚ್ 24 ರಂದು ಉಪ್ಪಳದಲ್ಲಿ ದರೋಡೆ ನಡೆದಿತ್ತು. ಎಟಿಎಂ ಕೇಂದ್ರಕ್ಕೆ ಹಣ ತುಂಬಿಸಲು ಆಗಮಿಸಿದ ವಾಹನದಲ್ಲಿದ್ದ 50 ಲಕ್ಷ ರೂ.ಗಳನ್ನು ದರೋಡೆಗೈಯ್ಯಲಾಗಿತ್ತು. ಮಾಹಿತಿ ತಿಳಿದು ಆಗಮಿಸಿದ ಪೊಲೀಸರು ಸಿ.ಸಿ.ಕ್ಯಾಮರಾ ಪರಿಶೀಲಿಸಿದಾಗ ಆರೋಪಿಗಳ ಬಗ್ಗೆ ಸುಳಿವು ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಓರ್ವ ಆರೋಪಿ ಮುತ್ತು ಕುಮಾರ್ ನನ್ನು ತಿಂಗಳ ಬಳಿಕ ಬಂಧಿಸಲಾಗಿತ್ತು.‌

ಇದೀಗ ದರೋಡೆಯ‌ ಸೂತ್ರಧಾರ ಕಾರ್ವರ್ಣನ್ ಹಾಗೂ ಇನ್ನೋರ್ವ ಪರಾರಿಯಾಗಿದ್ದು ಈತನ ಬಂಧನಕ್ಕಾಗಿ ಪೊಲೀಸರು ತನಿಖೆ ಚುರುಕು ಗೊಳಿಸಿದ್ದರು. ಈತ ತಿರುಚ್ಚಿಯಲ್ಲಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News