ಕಾಸರಗೋಡು: ವಸ್ತ್ರ ಮಳಿಗೆಯಲ್ಲಿ ಅಗ್ನಿ ಅನಾಹುತ
Update: 2025-06-02 17:12 IST
ಕಾಸರಗೋಡು: ನಗರದ ಹಳೆ ಬಸ್ಸು ನಿಲ್ದಾಣ ಸಮೀಪದ ವಸ್ತ್ರ ಮಳಿಗೆ ಸೋಮವಾರ ಮುಂಜಾನೆ ಅಗ್ನಿ ಗಾಹುತಿಯಾಗಿದೆ.
ಹಳೆ ಬಸ್ಸು ನಿಲ್ದಾಣ ಪರಿಸರದ ಇಝ್ವಾ ಫರ್ದಾಸ್ ಮಳಿಗೆಯಲ್ಲಿ ಅನಾಹುತ ಸಂಭವಿಸಿದ್ದು, ಸುಮಾರು 50 ಲಕ್ಷ ರೂ.ನಷ್ಟ ಅಂದಾಜಿಸಲಾಗಿದೆ.
ಸ್ಥಳೀಯರು ಗಮನಿಸಿ ಅಗ್ನಿಶಾಮಕದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಕಾಸರಗೋಡು, ಕಾಞಿಂಗಾಡ್, ಉಪ್ಪಳದಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು. ಬಕ್ರೀದ್ ಹಿನ್ನಲೆಯಲ್ಲಿ ಫರ್ದಾ ಹಾಗೂ ಇನ್ನಿತರ ವಸ್ತ್ರಗಳು ಅಗ್ನಿ ಗಾಹುತಿಯಾಗಿವೆ.