ಕಾಸರಗೋಡು: ರೈಲು ಬಡಿದು ಯುವತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
Update: 2025-06-15 18:53 IST
ಕೀರ್ತನಾ
ಕಾಸರಗೋಡು: ರೈಲು ಬಡಿದು ಯುವತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಪಳ್ಳಿಕೆರೆಯಲ್ಲಿ ರವಿವಾರ ಬೆಳಿಗ್ಗೆ ನಡೆದಿದೆ.
ಚೆರ್ವತ್ತೂರು ತುರುತ್ತಿ ಅಲಿಪ್ಪುರದ ಕೀರ್ತನಾ (24) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ರವಿವಾರ ಬೆಳಗ್ಗೆ ರೈಲ್ವೆ ಹಳಿಯಲ್ಲಿ ಮೃತದೇಹ ಪತ್ತೆಯಾಗಿದೆ. ಬಳಿಕ ಸಂಬಂಧಿಕರು ಅಗಮಿಸಿ ಮೃತ ದೇಹದ ಗುರುತು ಪತ್ತೆಹಚ್ಚಿದರು. ಕೀರ್ತನಾ ಅವರು ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಪೊಲೀಸರು ಮಹಜರು ನಡೆಸಿ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ.
ಈ ಬಗ್ಗೆ ನೀಲೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.