×
Ad

ಮಂಜೇಶ್ವರ: ತಾಯಿಯನ್ನು ಕೊಂದು ಸುಟ್ಟು ಹಾಕಿದ ಪ್ರಕರಣ; ಆರೋಪಿ ಮೆಲ್ವಿನ್ ಬಂಧನ

Update: 2025-06-26 17:28 IST

ಹಿಲ್ಡಾ ಮೊಂತೆರೋ - ಮೆಲ್ವಿನ್

ಕಾಸರಗೋಡು: ತಾಯಿಯನ್ನು ಕೊಲೆಗೈದ ಪ್ರಕರಣದ ಆರೋಪಿ ಪುತ್ರನನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವರ್ಕಾಡಿ ಸಮೀಪದ ನಿವಾಸಿ ಹಿಲ್ಡಾ ಮೊಂತೆರೋ ಅವರ ಪುತ್ರ ಮೆಲ್ವಿನ್ (33) ಬಂಧಿತ ಆರೋಪಿ.

ಮೊಬೈಲ್ ಲೋಕೇಶನ್ ಕೇಂದ್ರೀಕರಿಸಿ ನಡೆಸಿದ ತನಿಖೆಯಿಂದ ಆರೋಪಿಯನ್ನು ಕೊಲ್ಲೂರಿನಲ್ಲಿ ಬಂಧಿಸಲಾಗಿದೆ. ಗುರುವಾರ ಮುಂಜಾನೆ ಘಟನೆ ನಡೆದಿತ್ತು. ಮಲಗಿದ್ದ ತಾಯಿ ಹಿಲ್ಡಾ ಅವರನ್ನು ಕೊಲೆಗೈದು ನಂತರ ಸುಟ್ಟು ಹಾಕಿ ಮನೆ ಸಮೀಪದ ಪೊದೆಗೆ ಎಸೆದಿದ್ದನು ಎಂದು ತಿಳಿದುಬಂದಿದ್ದು,  ಮನೆಗೆ ಬಂದಿದ್ದ ನೆರೆಮನೆಯ ಲೋಲಿಟಾ ಅವರನ್ನೂ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದು, ಲೋಲಿಟಾ ಅವರು ಗಾಯಗೊಂಡಿದ್ದಾರೆ.

ಕೃತ್ಯದ ಬಳಿಕ ಆರೋಪಿ ಮೆಲ್ವಿನ್ ಆಟೋ ರಿಕ್ಷಾ ಮೂಲಕ ಹೊಸಂಗಡಿಗೆ ತಲಪಿ ಅಲ್ಲಿಂದ ಬಸ್ ಮೂಲಕ ಮಂಗಳೂರಿಗೆ ಹೋಗಿದ್ದು, ಅಲ್ಲಿಂದ ಕೊಲ್ಲೂರಿಗೆ ಪರಾರಿಯಾಗಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News