×
Ad

ಕಾನೂನು ಕಾಲೇಜುಗಳು ಪ್ರಜಾಪ್ರಭುತ್ವದ ಭದ್ರ ಬುನಾದಿ: ಸ್ಪೀಕರ್ ಯು.ಟಿ. ಖಾದರ್

Update: 2025-07-17 20:46 IST

ಕಾಸರಗೋಡು: ಯಾವುದೇ ದೇಶದ ಸಂವಿಧಾನ ಮತ್ತು ಕಾನೂನುಗಳು ಪರಿಣಾಮಕಾರಿಯಾಗಿ ಜಾರಿಯಾಗಬೇಕಾದರೆ ಜನತೆಗೆ ಕಾನೂನಿನ ಅರಿವು ಮಹತ್ವದ್ದಾಗಿದ್ದು, ಈ ನಿಟ್ಟಿನಲ್ಲಿ ಸಅದಿಯಾ ಸಂಸ್ಥೆಯ ಮೂಲಕ ಕಾನೂನು ಕಾಲೇಜು ಆರಂಭವಾಗುತ್ತಿರುವುದು ಬಹಳಷ್ಟು ಸಂತಸದಾಯಕ ವಿಚಾರ ಎಂದು ಕರ್ನಾಟಕ ವಿದಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.

ಅವರು ಕಾಸರಗೋಡು ಜಾಮಿಆ ಸಅದಿಯಾ ಕಾಲೇಜಿನ ಅಧೀನದಲ್ಲಿ ಆರಂಭವಾಗುವ ನೂತನ ಕಾನೂನು ಕಾಲೇಜಿನ ಶಂಕುಸ್ಥಾಪನೆಯ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ತಾಜುಲ್‌ ಉಲಮಾ ಉಳ್ಳಾಲ ತಂಙಳ್, ನೂರುಲ್ ಉಲಮಾ ಎಂ.ಎ. ಉಸ್ತಾದ್ ಹಾಗೂ ಕಲ್ಲಟ್ರ ಅಬ್ದುಲ್ ಖಾದರ್ ಹಾಜಿ ಅವರ ಪೂರ್ವಕಾಲದ ಪರಿಶ್ರಮವೇ ಇಂದಿನ ಯಶಸ್ವಿಗೆ ಕಾರಣವಾಗಿದ್ದು, ವಿಶ್ವವಿಖ್ಯಾತ ಮತ - ಭೌತಿಕ ಸಂಸ್ಥೆಯ ರೂವಾರಿ ಶೈಖುನಾ ಎ.ಪಿ.ಉಸ್ತಾದ್ ಹಾಗೂ ಕುಂಬೋಳ್ ತಂಙಳ್ ಅವರ ನೇತೃತ್ವವು ನಮಗೆ ಮಾದರಿಯಾಗಿದ್ದು, ಮುಂದಿನ ದಿನಗಳಲ್ಲಿ ಜಾಮಿಆ ಸಅದಿಯ ಸಂಸ್ಥೆಯು ಕರ್ನಾಟಕ - ಕೇರಳದ ಗಡಿಭಾಗದ ವಿದ್ಯಾರ್ಥಿಗಳ ಶಿಕ್ಷಣ ಕಾಶಿಯಾಗಲಿದೆ ಎಂದು ಹೇಳಿದರು.

ಜಾಮಿಆ ಸಅದಿಯಾ ಸಂಸ್ಥೆಯ ಅಧ್ಯಕ್ಷರಾದ ಕುಂಬೋಳ್ ಆಟಕೋಯ ತಂಙಳ್ ದುಆ ಪ್ರಾರ್ಥನೆಗೈದರು.

ಕಾರ್ಯಕ್ರಮದಲ್ಲಿ ಎನ್.ಇ. ಮುಹಮ್ಮದ್ ಹಾಜಿ, ಉದುಮ ಶಾಸಕ ಕುಂಞಂಬು, ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು, ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ಮಾಣಿಕ್ಕೊತ್ ಉಸ್ತಾದ್, ಹುಸೈನ್ ಸ-ಅದಿ ಕೆ.ಸಿ.ರೋಡ್ ಸಹಿತ ಹಲವಾರು ಉಲಮಾ - ಉಮರಾಗಳು ಭಾಗವಹಿಸಿದ್ದರು.

ಪಲ್ಲಂಗೋಡ್ ಅಬ್ದುಲ್ ಖಾದರ್ ಮದನಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News