×
Ad

ಮೇ 24- 25: ಬೇತ್ರಿಯಲ್ಲಿ ಕೊಡಗು ಜಿಲ್ಲಾ ಮಟ್ಟದ ಮುಸ್ಲಿಮ್ ವಾಲಿಬಾಲ್ ಕಪ್ ಪಂದ್ಯಾಟ

Update: 2025-05-08 10:53 IST
ಸಾಂದರ್ಭಿಕ ಚಿತ್ರ (Meta AI)

ಮಡಿಕೇರಿ: ಇಲ್ಲಿನ ಬೇತ್ರಿಯ ಎಸ್.ಇ.ಎಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ 40 ವರ್ಷ ಮೇಲ್ಪಟ್ಪ ಪುರುಷರ 'ಕೊಡಗು ಜಿಲ್ಲಾ ಮಟ್ಟದ ಮುಸ್ಲಿಮ್ ಕಪ್ ವಾಲಿಬಾಲ್ ಪಂದ್ಯಾಟ'ವು ಮೇ 24 ಮತ್ತು 25ರಂದು ಬೇತ್ರಿಯಲ್ಲಿ ಜರುಗಲಿದೆ.

ಕೊಡಗು ಜಿಲ್ಲೆಯ ಮುಸ್ಲಿಮ್ ಸಮುದಾಯದಲ್ಲಿ ಹಲವಾರು 40 ವರ್ಷ ಮೇಲ್ಪಟ್ಟ ಅನುಭವಿ ವಾಲಿಬಾಲ್ ಆಟಗಾರರು ಇದ್ದು, ಅವರಿಗೆ ವೇದಿಕೆ ಒದಗಿಸಿಕೊಡುವ ಉದ್ದೇಶದಿಂದ ಈ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ. ಮೇ 25ರಂದು ಸಹೋದರ ಬಾಂಧವರ ನಡುವೆ ಸೌಹಾರ್ದ ಪಂದ್ಯ ಕೂಡ ನಡೆಯಲಿದ್ದು, ತಂಡವನ್ನು ನೋಂದಾಯಿಸಲು ರಶೀದ್(ಮೊ.ಸಂ.: 8971242172) ಅಥವಾ ಕಬೀರ್ (ಮೊ.ಸಂ.: 9845762800) ಅವರನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News