×
Ad

ಮಡಿಕೇರಿ | ಬಿಜೆಪಿ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಕಳ್ಳತನ ಆರೋಪ : 13 ಮಂದಿಯ ಬಂಧನ

Update: 2024-04-03 20:30 IST

ಮಡಿಕೇರಿ : ಇತ್ತೀಚಿಗೆ ಕುಶಾಲನಗರ ಮತ್ತು ಮಡಿಕೇರಿಯಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾಜಿ ಶಾಸಕರ ಸಹಿತ ಇತರರ ಜೇಬಿನಿಂದ ಪಿಕ್ ಪಾಕೆಟ್ ಮಾಡಿದ್ದ 13 ಮಂದಿ ಆರೋಪಿಗಳನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಿವಮೊಗ್ಗ ಮೂಲದ 11 ಮತ್ತು ಬೆಂಗಳೂರು ಮೂಲದ ಇಬ್ಬರು ಆರೋಪಿಗಳನ್ನು ಇದೀಗ ನ್ಯಾಯಾಲಯದ ವಶಕ್ಕೆ ನೀಡಲಾಗಿದೆ. ಆರೋಪಿಗಳು ಪಿಕ್ ಪಾಕೆಟ್ ಮಾಡಿದ್ದ 1 ಲಕ್ಷ 96 ಸಾವಿರದ 300 ರೂ.ಗಳ ಪೈಕಿ 65 ಸಾವಿರದ 960 ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ. ಕೃತ್ಯಕ್ಕೆ ಬಳಸಿದ್ದ 12 ಮೊಬೈಲ್ ಫೋನ್‍ಗಳು, 2 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

ಬಂಧಿತ ಆರೋಪಿಗಳು: 

ಶಿವಮೊಗ್ಗ ಭದ್ರಾವತಿಯ ಜಯಣ್ಣ ಅಲಿಯಾಸ್ ಕಿರಿಕ್ ಜಯ(38), ಪುಟ್ಟರಾಜು ಅಲಿಯಾಸ್ ಪುಟ್ಟ(39), ಸಿ.ನಾಗರಾಜ ಅಲಿಯಾಸ್ ಕೋತಿ ಕಿಚ್ಚ(43), ರಾಮು ಅಲಿಯಾಸ್ ಕುಳ್ಳರಾಮು(43), ಕೆ.ಉಮೇಶ್(36), ಜಯಣ್ಣ ಅಲಿಯಾಸ್ ದೊಡ್ಡ ಜಯಣ್ಣ(53), ಬೋಜಪ್ಪ ಅಲಿಯಾಸ್ ಬೋಜ(50), ಮೆಹಬೂಬ್ ಸುಭಾನ್(48), ಡಿ.ಗಿರೀಶ(31), ಬಾಲು(35), ಬೆಂಗಳೂರು ಹೆಬ್ಬುಗೋಡಿಯ ಹರೀಶ(35), ನೆಲಮಂಗಲದ ರಂಗಣ್ಣ ಅಲಿಯಾಸ್ ರಂಗ(50) ಎಂಬವರೇ ಬಂಧಿತ ಪಿಕ್ ಪಾಕೆಟ್ ಆರೋಪಿಗಳಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News