×
Ad

ಕಟ್ಟೆಮಾಡು ದೇವಾಲಯ ಅಚ೯ಕರ ಮೇಲೆ ಹಲ್ಲೆ ಪ್ರಕರಣ: ಆರೋಪಿಗಳ ಬಂಧನಕ್ಕೆ 2 ದಿನಗಳ ಗಡುವು ನೀಡಿದ ಬ್ರಾಹ್ಮಣ ಸಮಾಜ

Update: 2025-01-28 23:57 IST

ಮಡಿಕೇರಿ: ಕಟ್ಟೆಮಾಡು ಗ್ರಾಮದ ಶ್ರೀ ಮೖತ್ಯಂಜಯ ದೇವಾಲಯದ ಅಚ೯ಕರ ಮೇಲಿನ ಹಲ್ಲೆಯನ್ನು ಖಂಡಿಸಿರುವ ಕೊಡಗು ಬ್ರಾಹ್ಮಣ ಸಮಾಜ, ಹಲ್ಲೆ ಆರೋಪಿಗಳ ಬಂಧನಕ್ಕೆ ಎರಡು ದಿನಗಳ ಗಡುವನ್ನು ನೀಡಿದೆ. ತಪ್ಪಿದ್ದಲ್ಲಿ ಜ. 31 ರಂದು ಜಿಲ್ಲೆಯಾದ್ಯಂತ ದೇವಾಲಯಗಳಲ್ಲಿ ಬೆಳಗ್ಗಿನ ಪೂಜೆ ಪೂರೈಸಿ ಅನಂತರ ಭಕ್ತರಿಗೆ ದೇವಾಲಯವನ್ನು ಬಂದ್ ಮಾಡಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.

ನಗರದ ಪೊಲೀಸ್ ವರಿಷ್ಟಾಧಿಕಾರಿ ಕಚೇರಿ ಮುಂದೆ ಬ್ರಾಹ್ಣಣ ಸಮಾಜದ ನೂರಾರು ಮಂದಿ ಪ್ರತಿಭಟನೆ ನಡೆಸಿದರು.

ಪೊಲೀಸ್ ವರಿಷ್ಟಾಧಿಕಾರಿ ಕೆ. ರಾಮರಾಜನ್ ಅವರನ್ನು ಭೇಟಿಯಾದ ಬ್ರಾಹ್ಮಣ ವಿದ್ಯಾಭಿವೖದ್ದಿ ನಿಧಿ ಕೊಡಗು ಅಧ್ಯಕ್ಷರಾದ ರಾಮಚಂದ್ರಮೂಗೂರು, ಪ್ರಮುಖರಾದ ಶ್ರೀಧರ್ ನೆಲ್ಲಿತ್ತಾಯ, ಜಿ.ಟಿ. ರಾಘವೇಂದ್ರ ಬಿ.ಜಿ ಅನಂತಶಯನ, ಎಸ್.ಎಸ್. ಸಂಪತ್ ಕುಮಾರ್, ವಕೀಲ ಕೖಷ್ಣಮೂತಿ೯, ಪ್ರಭಾಕರ್ ನೆಲ್ಲಿತ್ತಾಯ, ಡಾ. ರಾಜಾರಾಮ್, ರಾಜಶೇಖರ್, ನಿದೇ೯ಶಕ ಮಂಜುನಾಥ್, ಕೆ.ಕೆ.ವಿಶ್ವನಾಥ್, ಎ.ಗೋಪಾಲಕೖಷ್ಣ , ಅಚ೯ಕರ ಸಂಘದ ಪ್ರಮುಖ ಮಹಾಬಲೇಶ್ವರ ಭಟ್, ರಾಮಕೖಷ್ಣ, ಸುದಶ೯ನ್ , ಪವನ್, ಕೊಡಗು ಬ್ರಾಹ್ಮಣ ಕ್ಷೇಮಾಭಿವೖದ್ದಿ ಸಂಘದ ಅಧ್ಯಕ್ಷ ರಾಘವೇಂದ್ರ ವೈಲಾಯ, ನಿವೖತ್ತ ಮೇಜರ್ ವೆಂಕಟಗಿರಿ, ಹೆಚ್.ಎಸ್. ತಿಮ್ಮಪ್ಪಯ್ಯ, ಹಾ.ತಿ.ಜಯಪ್ರಕಾಶ್, ಡಿ.ಆರ್. ಪ್ರಶಾಂತ್ ಮಹೇಶ್ ಸಗಿ೯ತಾಯ, ಕೆ.ವಿ. ವೆಂಕಟರಮಣ, ವರುಣ್ ಶಮಾ೯, ವೀಣಾ ಪುರುಷೋತ್ತಮ, ನೀರಜ ರಮೇಶ್ ಸೇರಿದಂತೆ ಹಲವರು ಒತ್ತಾಯ ಪತ್ರವನ್ನು ಸಲ್ಲಿಸಿದರು.

ಕಟ್ಟೆಮಾಡು ದೇವಾಲಯದ ಅಚ೯ಕರಾದ ವಿಘ್ನೇಷ್ ಭಟ್ ಅವರ ಮೇಲೆ ಹಲ್ಲೆ ನಡೆಸಿ, ಸ್ಥಳದಲ್ಲಿದ್ದ ಅವರ ತಾಯಿ ಮೇಲೆ ಕೂಡ ಹಲ್ಲೆ ಮಾಡಿರುವುದು ಖಂಡನೀಯ. ಪ್ರಕರಣದ ಪ್ರಮುಖ ಆರೋಪಿ ಮಂಡೇಟಿರ ಅನಿಲ್ ಮತ್ತು ಜತೆಗಿದ್ದವರನ್ನು ಪೊಲೀಸರು ಇನ್ನು 2 ದಿನಗಳೊಳಗೆ ಬಂಧಿಸಬೇಕು. ಬಂಧನ ಆಗದೇ ಹೋದಲ್ಲಿ ಜ. 31 ರಂದು ಶುಕ್ರವಾರ ಬೆಳಗ್ಗೆ ಬ್ರಾಹ್ಮಣ ಸಮಾಜದಿಂದ ತೀವ್ರ ಪ್ರತಿಭಟನೆ ಕೈಗೊಳ್ಳಲಾಗುತ್ತದೆ ಎಚ್ಚರಿಕೆ ನೀಡಲಾಯಿತು.

ಹಲ್ಲೆ ಘಟನೆಯ ಹಿಂದೆ ಯಾರೇ ಪ್ರಭಾವಿಗಳು ಇದ್ದರೂ ಪೊಲೀಸರು ಬಹಿರಂಗಗೊಳಿಸಬೇಕು. ಆರೋಪಿಗಳನ್ನು ಹೆಡೆಮುರಿ ಕಟ್ಟುವ ಸಂದಭ೯ ಯಾರದ್ದೇ ಪ್ರಭಾವಕ್ಕೆ ಮಣಿಯಬಾರದು ಎಂದೂ ಪೊಲೀಸ್ ವರಿಷ್ಟಾಧಿಕಾರಿಗಳನ್ನು ಒತ್ತಾಯಿಸಲಾಯಿತು.

ಈ ಸಂದಭ೯ ಮಾತನಾಡಿದ ಪೊಲೀಸ್ ವರಿಷ್ಟಾಧಿಕಾರಿ ರಾಮರಾಜನ್, ಆರೋಪಿಗಳ ಪತ್ತೆಗೆ ಈಗಾಗಲೇ ಪೊಲೀಸ್ ತಂಡ ಕಾಯ೯ಪ್ರವೃತ್ತವಾಗಿದೆ. ಈವರೆಗೂ ಯಾವುದೇ ಒತ್ತಡ ಬರಲಿಲ್ಲ. ಯಾವುದೇ ಪ್ರಭಾವಕ್ಕೂ ಮಣಿಯದೇ ಪೊಲೀಸರು ಆರೋಪಿಗಳ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಭರವಸೆ ನೀಡಿದರು. 

ಜಿಲ್ಲಾಧಿಕಾರಿಗಳ ಭೇಟಿ:

ಜಿಲ್ಲಾಧಿಕಾರಿ ವೆಂಕಟರಾಜಾ ಅವರನ್ನೂ ಭೇಟಿಯಾದ ಬ್ರಾಹ್ಮಣ ವಿಧ್ಯಾಭಿವೖದ್ದಿ ನಿಧಿ ಕೊಡಗು ಪ್ರಮುಖರು, ಅಚ೯ಕರ ಮೇಲೆ ಹಲ್ಲೆ ಮಾಡಿದವರನ್ನು ಶೀಘ್ರವೇ ಬಂಧಿಸುವಂತೆ ಒತ್ತಾಯಿಸಿದರು. ಬ್ರಾಹ್ಮಣ ವಿಧ್ಯಾಭಿವೖದ್ದಿ ನಿಧಿ ಕೊಡಗು ಅಧ್ಯಕ್ಷ ರಾಮಚಂದ್ರಮೂಗೂರು ರಾಘವೇಂದ್ರ ವೈಲಾಯ, ಜಿ. ಆರ್. ರವಿಶಂಕರ್ ರಿಸೇರಿದಂತೆ ಪ್ರಮುಖರು ಹಾಜರಿದ್ದರು. ಪೊಲೀಸರು ಈಗಾಗಲೇ ತನಿಖೆ ಕೈಗೊಂಡಿದ್ದು, ಶೀಘ್ರದಲ್ಲಿಯೇ ಆರೋಪಿಗಳ ಬಂಧನದ ಭರವಸೆ ಇದೆ. ಕೊಡಗು ಶಿಕ್ಷಣವಂತರು, ಪ್ರಜ್ಞಾವಂತರ ಜಿಲ್ಲೆ ಎನಿಸಿದ್ದು ಈ ಜಿಲ್ಲೆಯಲ್ಲಿ ಎರಡು ಸಮುದಾಯಗಳ ಜನರು ಶಾಂತಿ ಸುವ್ಯವಸ್ಥೆ ಕಾಪಾಡಲ ಸೌಹಾಧ೯ಯುುತವಾಗಿ ಮುಂದಾಗುವ ನಿಟ್ಟಿನಲ್ಲಿ ಜಿಲ್ಲಾಡಳಿತ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದೆ ಎಂದೂ ಜಿಲ್ಲಾಧಿಕಾರಿ ವೆಂಕಟರಾಜಾ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News