×
Ad

ಮಡಿಕೇರಿ: ಪೊಲೀಸ್ ಸಿಬ್ಬಂದಿ ಮನೆಗೇ ನುಗ್ಗಿ ನಗದು, ಚಿನ್ನಾಭರಣ ಕಳವು

Update: 2024-05-30 23:09 IST

ಮಡಿಕೇರಿ: ಹಾಡಹಗಲೇ ಪೊಲೀಸ್ ಸಿಬ್ಬಂದಿಯ ಮನೆಗೇ ಕಳ್ಳರು ನುಗ್ಗಿ ನಗದು ಮತ್ತು ಚಿನ್ನಾಭರಣ ದೋಚಿದ ಪ್ರಕರಣ ಕುಶಾಲನಗರ ಸಮೀಪದ ಮಾದಾಪಟ್ಟಣ ಗ್ರಾಮದಲ್ಲಿ ನಡೆದಿದೆ.

ಕುಶಾಲನಗರ ಪೊಲೀಸ್ ಠಾಣೆಯ ಸಿಬ್ಬಂದಿ ಪಿ.ಸಿ.ಸುನಿಲ್ ಎಂಬುವವರ ಮನೆಯ ಹಿಂಬಾಗಿಲು ಒಡೆದು ನುಗ್ಗಿದ ಚೋರರು 15 ಸಾವಿರ ರೂ. ನಗದು ಮತ್ತು 40 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದಾರೆ. ಸಮೀಪದ ಮನೆಯಲ್ಲಿ ಕೂಡ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ.

ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಘಟನೆಗೆ ಸಂಬಂಧಿಸಿದಂತೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News