×
Ad

ಮಡಿಕೇರಿ ದಸರಾದಲ್ಲಿ ನಡೆದ ದಾಂಧಲೆಯಲ್ಲಿ ಡಿವೈಎಸ್ಪಿಗೆ ಗಾಯ, ಓರ್ವನ ಬಂಧನ: ಕೊಡಗು ಎಸ್ಪಿ

Update: 2025-10-03 18:09 IST

ಮಡಿಕೇರಿ: ಮಡಿಕೇರಿ ದಸರಾ ದಶಮಂಟಪಗಳ ಶೋಭಾಯಾತ್ರೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ದಾಂಧಲೆ ನಡೆದಿದೆ. ಘಟನೆಯಲ್ಲಿ ಡಿವೈಎಸ್ಪಿ ಸೂರಜ್ ಅವರು ಗಾಯಗೊಂಡಿದ್ದು, ಯಕ್ಷಿತ್ ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾಹಿತಿ ನೀಡಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ, ದಾಂಧಲೆ ನಡೆಸುತ್ತಿದ್ದವರನ್ನು ನಿಯಂತ್ರಿಸಲು ವೇದಿಕೆ ಮೇಲೆ ಹೋದ ಡಿವೈಎಸ್ಪಿ ಹಾಗೂ ಸಬ್ ಇನ್‌ಸ್ಪೆಕ್ಟರ್ ಒಬ್ಬರನ್ನು ತಳ್ಳಿದ ಪರಿಣಾಮ ಡಿವೈಎಸ್ಪಿ ಸೂರಜ್ ಅವರು ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಕ್ಷಿತ್ ನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

(ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್)

 

ದಶಮಂಟಪಗಳಿಗೆ ಬಹುಮಾನ ಘೋಷಿಸುವ ಸಂದರ್ಭ ಪ್ರತಿವರ್ಷ ಈ ರೀತಿಯ ಗೊಂದಲ ಮತ್ತು ಅಸಮಾಧಾನ ವ್ಯಕ್ತವಾಗುತ್ತಿದೆ. ಯಾವುದೇ ಗೊಂದಲಗಳಿಗೆ ಅವಕಾಶ ಇಲ್ಲದಂತೆ ನೋಡಿಕೊಳ್ಳಬೇಕೆಂದು ಮಂಟಪ ಸಮಿತಿಗಳಲ್ಲಿ ನಾವು ಮೊದಲೇ ಮನವಿ ಮಾಡಿಕೊಂಡಿದ್ದೆವು. ಆದರೆ, ಮತ್ತೆ ಗಲಾಟೆಯಾಗಿದೆ ಎಂದ ಕೆ.ರಾಮರಾಜನ್, ಬಹುಮಾನ ವಿತರಣೆಯ ವಿಚಾರದಲ್ಲಿ ಉಂಟಾಗುವ ಗೊಂದಲ ನಿವಾರಣೆಗೆ ಸಮಿತಿಗಳು ಸೂಕ್ತ ಚಿಂತನೆ ನಡೆಸುವ ಅಗತ್ಯವಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News