ಮಡಿಕೇರಿ | ದಸರಾ ಮೆರವಣಿಗೆ ವೇಳೆ ಅವಘಡ: ಮೂವರಿಗೆ ಗಾಯ
Update: 2023-10-25 10:01 IST
ಮಡಿಕೇರಿ ಅ.25 : ಐತಿಹಾಸಿಕ ಮಡಿಕೇರಿ ದಸರಾ ದಶಮಂಟಪಗಳ ಶೋಭಾಯಾತ್ರೆ ಸಂದರ್ಭ ಅವಘಡ ಸಂಭವಿಸಿದ್ದು, ಮೂವರು ಗಾಯಗೊಂಡಿದ್ದಾರೆ.
ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದ ಮಂಟಪವು ಶೋಭಾಯಾತ್ರೆಯಲ್ಲಿ ತೊಡಗಿದ್ದಾಗ ಟ್ರ್ಯಾಕ್ಟರ್ ವೊಂದು ನಗರದ ಡಿಸಿಸಿ ಬ್ಯಾಂಕ್ ಬಳಿ ರಸ್ತೆಗೆ ಉರುಳಿಬಿದ್ದಿದೆ. ಇದರಿಂದ ಬೃಹತ್ ಲೈಟಿಂಗ್ ಬೋರ್ಡ್ ಮತ್ತು ಕಲಾಕೃತಿಗಳು ರಸ್ತೆಗೆ ಬಿದ್ದವು.
ಈ ವೇಳೆ ಮೂವರು ಗಾಯಗೊಂಡಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ನಸುಕಿನ 3:30 ಗಂಟೆ ವೇಳೆಗೆ ಘಟನೆ ನಡೆದಿದ್ದು, ನೆರೆದಿದ್ದ ಸಾವಿರಾರು ಜನರು ಆತಂಕಕ್ಕೀಡಾಗಿದ್ದರು.