×
Ad

ಕಬಡಕ್ಕೇರಿ ಬಾಲವಿಕಾಸ ಸಮಿತಿಯಿಂದ ಹೊದ್ದೂರು ಪಂಚಾಯತ್ ಅಧ್ಯಕ್ಷ ಹೆಚ್.ಎ. ಹಂಸ ಅವರಿಗೆ ಸನ್ಮಾನ

Update: 2025-01-18 10:54 IST

ಮಡಿಕೇರಿ : ಜನವರಿ 26 ರಂದು ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸರಕಾರದ ವಿಶೇಷ ಅತಿಥಿಯಾಗಿ ಆಯ್ಕೆಯಾಗಿರುವ ಮಡಿಕೇರಿ ತಾಲ್ಲೂಕಿನ ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹೆಚ್. ಎ. ಹಂಸ ಅವರನ್ನು ಕಬಡಕ್ಕೇರಿ ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾದ ಸನ್ಮಾನ ಕಾರ್ಯಕ್ರಮದಲ್ಲಿ ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಶ್ವೇತಕಲಾ, ಮಾಜಿ ಅಧ್ಯಕ್ಷೆ ಹಂಸಾವತಿಸುರೇಶ್, ಬಾಲವಿಕಾಸ ಸಮಿತಿಯ ಸದಸ್ಯರಾದ ಜಲಜಾಕ್ಷಿ, ಫಾತಿಮಾ, ಝರೀನಾ, ವಿಶ್ವನಾಥ್, ಲಕ್ಷ್ಮಣ, ಪಚ್ಚುಪ್ರಸಾದ್, ಮುಹಮ್ಮದ್, ರುಕ್ಮಿಣಿ,  ಪಾರ್ವತಿ, ಅಂಗನವಾಡಿ ಕಾರ್ಯಕರ್ತೆ ತಂಝೀನಾ ಭಾನು, ಸಹಾಯಕಿ ಪ್ರೇಮ ಹಾಗೂ ಅಂಗನವಾಡಿಯ ಪುಟಾಣಿಮಕ್ಕಳು,ಮತ್ತು ಗ್ರಾಮಸ್ಥರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News