×
Ad

ಕೊಡಗು | ಕಾಫಿ ತೋಟದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Update: 2024-10-19 19:28 IST

ಮಡಿಕೇರಿ : ಎಮ್ಮೆಮಾಡು ಗ್ರಾಮದ ಮನೆಯೊಂದರ ಬಳಿ ಕಾಫಿ ತೋಟದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಎಮ್ಮೆಮಾಡು ಗ್ರಾಮದ ಕನ್ನಡಿಯಂಡ ನಿವಾಸಿ ಮಹಮ್ಮದ್ ಕೆ.ಎಂ.(43) ಎಂಬಾತನೆ ಬಂಧಿತ ಆರೋಪಿಯಾಗಿದ್ದು, ತೋಟದಲ್ಲಿ ಬೆಳೆಯಲಾಗಿದ್ದ 35 ಕೆ.ಜಿ. 675 ಗ್ರಾಂ ಹಸಿ ಗಾಂಜಾ ಮತ್ತು 275 ಗ್ರಾಂ ಒಣ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪೊಲೀಸ್ ವೃತ್ತ ನಿರೀಕ್ಷಕ ಐ.ಪಿ.ಮೇದಪ್ಪ ಅವರ ನೇತೃತ್ವದ ವಿಶೇಷ ತಂಡ ದಾಳಿ ನಡೆಸಿ ಮಾಲು ಸಹಿತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News