ಕೊಡಗು : ಕೌಟುಂಬಿಕ ಕಲಹ ಪತ್ನಿಯ ಕೊಲೆಯಲ್ಲಿ ಅಂತ್ಯ; ಪೊಲೀಸರಿಗೆ ಶರಣಾದ ಪತಿ
Update: 2024-07-20 14:08 IST
ನಾಯಕಂಡ ಸಿ.ಬೋಪಣ್ಣ | ಶಿಲ್ಪಾ ಸೀತಮ್ಮ
ಮಡಿಕೇರಿ ಜು.20 : ದಂಪತಿಯ ಕಲಹ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ವಿರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೇಟೋಳಿ ಗ್ರಾಮದಲ್ಲಿ ನಡೆದಿದೆ.
ಶಿಲ್ಪಾ ಸೀತಮ್ಮ (38) ಗುಂಡೇಟಿನಿಂದ ಮೃತಪಟ್ಟ ಮಹಿಳೆಯಾಗಿದ್ದು, ಗುಂಡು ಹಾರಿಸಿದ ಪತಿ ನಾಯಕಂಡ ಸಿ.ಬೋಪಣ್ಣ (43) ಬಂದೂಕಿನೊಂದಿಗೆ ಪೊಲೀಸರಿಗೆ ಶರಣಾಗಿದ್ದಾರೆ.
ಪತಿ-ಪತ್ನಿ ನಡುವೆ ಕಳೆದ ಕೆಲವು ದಿನಗಳಿಂದ ಕೌಟುಂಬಿಕ ಕಲಹ ನಡೆಯುತ್ತಿದ್ದು, ಇಂದು ಬೆಳಿಗ್ಗೆ ಇದು ವಿಕೋಪಕ್ಕೆ ತಿರುಗಿ ಬೋಪಣ್ಣ ಅವರು ಶಿಲ್ಪಾ ಸೀತಮ್ಮ ಅವರ ಮೇಲೆ ಗುಂಡು ಹಾರಿಸಿರುವುದಾಗಿ ತಿಳಿದು ಬಂದಿದೆ.
ನಾಯಕಂಡ ಸಿ.ಬೋಪಣ್ಣ ಅವರು ವಿರಾಜಪೇಟೆ ಪೊಲೀಸರಿಗೆ ಶರಣಾಗಿದ್ದು, ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ. ಕೊಲೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ವಿರಾಜಪೇಟೆ ನಗರ ಪೊಲೀಸ್ ಠಾಣಾ ಅಧಿಕಾರಿಗಳು ಹಾಗೂ ಅಪರಾಧ ಪತ್ತೆ ದಳದ ತಜ್ಞರ ತಂಡ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.