×
Ad

ಮಡಿಕೇರಿ | ಜೂಜಾಟವಾಡುತ್ತಿದ್ದ 7 ಆರೋಪಿಗಳ ಬಂಧನ

Update: 2024-08-18 19:05 IST

   ಸಾಂದರ್ಭಿಕ ಚಿತ್ರ (PC : Meta AI)

ಮಡಿಕೇರಿ : ಅಕ್ರಮವಾಗಿ ಜೂಜಾಟ ನಡೆಸುತ್ತಿದ್ದ 7 ಆರೋಪಿಗಳನ್ನು ಶನಿವಾರಸಂತೆ ಪೊಲೀಸರು ಬಂಧಿಸಿದ್ದಾರೆ. ಶನಿವಾರಸಂತೆಯ ತ್ಯಾಗರಾಜ ಕಾಲೋನಿಯ ಲೈನ್ ಮನೆಯೊಂದರ ಬಳಿ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದರು.

ಚಿಕ್ಕತೋಳೂರು ಗ್ರಾಮದ ಸಿ.ಎಂ.ಶರೀಫ್(44), ಗುಂಡುರಾವ್ ಬಡಾವಣೆಯ ರೆಹಮಾನ್(40), ಅಸ್ಸಾಂ ರಾಜ್ಯದ ಶಾಹೀದ್ ಇಸ್ಲಾಂ(35), ತ್ಯಾಗರಾಜ ಕಾಲೋನಿಯ ಶಫೀಕ್ ಉಲ್(26), ಹಾಸನ ಕಲರೆ ಗ್ರಾಮದ ಮುಮ್ತಾಜ್(46), ಅಸ್ಸಾಂ ಮೂಲದ ಇರ್ಷಾದ್(35), ಶಹಜಾನ್(46) ಎಂಬುವವರನ್ನು ವಶಕ್ಕೆ ಪಡೆದರು. ಆರೋಪಿಗಳ ಬಳಿಯಿಂದ 17,050 ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News