×
Ad

ಮಡಿಕೇರಿ | ವಾಹನಗಳ ಕಳ್ಳತನ, ಗಾಂಜಾ ಮಾರಾಟ ಯತ್ನ ಪ್ರಕರಣ : ಐವರ ಬಂಧನ

Update: 2024-08-31 21:10 IST

ಮಡಿಕೇರಿ : ವಾಹನಗಳ ಕಳ್ಳತನ ಮತ್ತು ಗಾಂಜಾ ಮಾರಾಟ ಯತ್ನ ಪ್ರಕರಣಗಳಿಗೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ.

ವಿರಾಜಪೇಟೆಯ ಪೆರುಂಬಾಡಿಯ ಆರ್ಜಿ ಗ್ರಾಮದ ಕೆ.ಬಿ.ಶಫೀಕ್ (26), ವಿರಾಜಪೇಟೆಯ ಚಿಕ್ಕಪೇಟೆಯ ಮುಹಮ್ಮದ್ ಆಸೀಂ (21), ಸಮೀರ್ ಕೆ.ಎಸ್ (26), ಮುನೀರ್ ಟಿ.ಐ (30), ಎಸ್.ದರ್ಶನ್ (25) ಬಂಧಿತ ಆರೋಪಿಗಳಾಗಿದ್ದಾರೆ.

ಇವರ ಬಳಿಯಿಂದ 1 ಕೆ.ಜಿ 83 ಗ್ರಾಂ ಗಾಂಜಾ, 10 ದ್ವಿಚಕ್ರ ವಾಹನಗಳು ಮತ್ತು ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಾಹನಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿರಿಯಾಪಟ್ಟಣ, ಬಿಳಿಕೆರೆ ಮತ್ತು ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಅವರ ನಿರ್ದೇಶನದ ಮೇರೆಗೆ ವಿರಾಜಪೇಟೆ ಡಿವೈಎಸ್‍ಪಿ ಮೋಹನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ಶಿವರುದ್ರ, ಪಿಎಸ್‍ಐಗಳಾದ ರವೀಂದ್ರ, ಪ್ರಮೋದ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News