×
Ad

ಮಡಿಕೇರಿ | ವಿಷ ಸೇವಿಸಿದ್ದ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಮೃತ್ಯು

Update: 2024-09-15 22:52 IST

ಸಾಂದರ್ಭಿಕ ಚಿತ್ರ

ಮಡಿಕೇರಿ: ನಕಲಿ ಸಹಿ ಮಾಡಿದ ಆರೋಪಕ್ಕೊಳಗಾಗಿ ವಿಷ ಸೇವಿಸಿದ್ದ ಮಡಿಕೇರಿ ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ತಹಶೀಲ್ದಾರರ ಸಹಿಯನ್ನು ನಕಲಿ ಮಾಡಿ ಖಜಾನೆಗೆ ಕಡತ ಕಳುಹಿಸಿದ್ದ ಆರೋಪವನ್ನು ಎದುರಿಸುತ್ತಿದ್ದ ಪ್ರಜ್ವಲ್ (38) ಮೃತ ಸಿಬ್ಬಂದಿಯಾಗಿದ್ದಾರೆ. ನಕಲಿ ಸಹಿ ಆರೋಪದಿಂದ ಸೆ.10ರಂದು ಮಡಿಕೇರಿಯ ಮನೆಯಲ್ಲಿ ವಿಷ ಸೇವಿಸಿದ್ದ ಪ್ರಜ್ವಲ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News