×
Ad

ಮಡಿಕೇರಿ: ರೆಸಾರ್ಟ್‍ನಲ್ಲಿ ಮಗು ಸೇರಿ ಮೂವರ ಮೃತದೇಹ ಪತ್ತೆ

Update: 2023-12-09 16:47 IST

ಮಡಿಕೇರಿ ಡಿ.9 : ಮಡಿಕೇರಿ ತಾಲ್ಲೂಕಿನ ಕಗ್ಗೋಡ್ಲು ಗ್ರಾಮದ ರೆಸಾರ್ಟ್‍ವೊಂದರಲ್ಲಿ ಮಗು ಸೇರಿ ಮೂವರ ಮೃತದೇಹ ಪತ್ತೆಯಾಗಿದೆ.

ರೆಸಾರ್ಟ್‍ನ ಕೋಣೆಯಲ್ಲಿ ಪತಿ, ಪತ್ನಿಯ ಮೃತದೇಹ ನೇಣು ಬಿಗದ ಸ್ಥಿತಿಯಲ್ಲಿದ್ದು, ಮಗುವಿನ ಮೃತದೇಹ ಹಾಸಿಗೆಯಲ್ಲಿ ಪತ್ತೆಯಾಗಿದೆ. ಕೇರಳ ರಾಜ್ಯದ ಕೊಟ್ಟಾಯಂ ಬಳಿಯ ಪಡಿಚಾಟು ಗ್ರಾಮದ ವಿನೋದ್ (37) ಹಾಗೂ ಅವರ ಪತ್ನಿ, ಮಗು ಮೃತಪಟ್ಟವರು. ಮಗುವನ್ನು ಕೊಂದು ದಂಪತಿ ನೇಣಿಗೆ ಶರಣಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಶುಕ್ರವಾರ ಸಂಜೆ ಪ್ರವಾಸಕ್ಕೆಂದು ಕೊಡಗಿಗೆ ಬಂದವರು ರೆಸಾರ್ಟ್‍ನಲ್ಲಿ ತಂಗಿದ್ದರು ಎಂದು ಹೇಳಲಾಗಿದೆ.

ಕೇರಳದಿಂದ ಕುಟುಂಬದ ಸದಸ್ಯರು ಬಂದ ಬಳಿಕವಷ್ಟೇ ಹೆಚ್ಚಿನ ಮಾಹಿತಿ ತಿಳಿಯಲಿದೆ. ಸ್ಥಳಕ್ಕೆ ಮಡಿಕೇರಿ ಗಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News